More

    ಲವ್ ಜಿಹಾದ್ ಪ್ರಯತ್ನದಲ್ಲಿದ್ದ 50 ವರ್ಷದ ಮುಸ್ಲಿಂ ವ್ಯಕ್ತಿಗೆ ಮದುವೆ ಮಂಟಪದಲ್ಲೇ ಬಿದ್ವು ಗೂಸಾ!

    ರಾಂಚಿ: ಅಸ್ಲಾಮ್ ಖಾನ್ ಎಂಬ 50 ವರ್ಷದ ವ್ಯಕ್ತಿ ತಾನೊಬ್ಬ ಹಿಂದೂ ಎಂದು ನಂಬಿಸಿ, ದುಡ್ಡಿನ ಆಸೆ ತೋರಿಸಿ ಬಡ ಹಿಂದೂ ಕುಟುಂಬದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಮದುವೆ ಕಾರ್ಯಕ್ರಮದ ವೇಳೆ ಈತನ ಕರಾಳ ಮುಖದ ಪರಿಚಯವಾಗಿದ್ದು, ಹಿಂದೂ ಅಲ್ಲ, ಮುಸ್ಲಿಂ ಎಂದು ಪೋಷಕರಿಗೆ ಗೊತ್ತಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಅಸ್ಲಾಮ್​ ಖಾನ್​ನನ್ನು ಥಳಿಸಿದ್ದಾರೆ. ಇನ್ನೇನು ಪೊಲೀಸರಿಗೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ತನ್ನ ಸ್ಕಾರ್ಪಿಯೋ ಕಾರಿನಲ್ಲಿ ಪರಾರಿಯಾಗಿದ್ದಾನೆ.

    ಜಾರ್ಖಾಂಡ್​​ನ ಬೊಕಾರೊದ ಸೆಕ್ಟರ್ -9 ರ ಹರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಹಾರ್ತೋಲಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಸುಮಾರು 50 ವರ್ಷ ವಯಸ್ಸಿನವನಾಗಿದ್ದು, ಧನಬಾದ್‌ನ ವಸ್ಸೇಪುರ್ ನಿವಾಸಿ ಎಂದು ವರದಿಯಾಗಿದೆ.

    ಬಾಲಕಿಯ ತಂದೆ ರಾಜು ಕಾಸೆರಾ ಎಂಬಾತನಿಗೆ ಒಟ್ಟು ಏಳು ಜನ ಮಕ್ಕಳು. ಮನೆಯಲ್ಲಿ ತೀರಾ ಬಡತನ. ಹೀಗಾಗಿ ಸಾಲಕ್ಕಾಗಿ ಬ್ಯಾಂಕ್​ ಒಂದಕ್ಕೆ ಭೇಟಿ ನೀಡಿದ್ದಾಗ ಆರೋಪಿ ಅಸ್ಲಾಮ್​ ಖಾನ್​ನ ಪರಿಚಯವಾಗಿತ್ತು. ಆದರೆ ಆತ ಮಾತ್ರ ಹೆಸರನ್ನು ಸಂಜಯ್ ಕಸೇರಾ ಎಂದು ಬದಲಾಯಿಸಿಕೊಂಡು ತಾನು ಹಿಂದೂ ಎಂಬಂತೆ ಫೋಸ್ ಕೊಟ್ಟಿದ್ದ.

    ಅಸ್ಲಾಮ್ ಖಾನ್ ತಾನು ಸಹಾಯ ಮಾಡುತ್ತೇನೆ ಎಂದು ಹೇಳಿ, ಸಾಲ ಕೊಡುವ ನೆಪದಲ್ಲಿ ರಾಜು ಕಾಸೆರಾ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ, ಮನೆಯಲ್ಲಿ ಹೆಣ್ಣು ಮಕ್ಕಳಿರುವುದನ್ನು ಗಮನಿಸಿದ್ದ.

    ಅದೊಂದು ದಿನ ಅಸ್ಲಾಮ್ ಖಾನ್, ರಾಜು ಕಾಸೆರಾ ಮನೆಗೆ ಬಂದು, ನಿನ್ನ ಮಗಳನ್ನು ನನಗೆ ಮದುವೆ ಮಾಡಿ ಕೊಡು. ಇದರಿಂದ ನಿನ್ನ ಆರ್ಥಿಕ ಪರಿಸ್ಥಿಯೂ ಸುಧಾರಿಸುತ್ತದೆ. ನಾನು ಅವಳಿಗೆ ಉತ್ತಮ ಭವಿಷ್ಯ ಕಲ್ಪಿಸಿ, ಆಕೆಯನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ, ಮದುವೆ ಮಾಡಿಕೊಡುವಂತೆ ಒತ್ತಡ ಹೇರಿದರು ಎಂದು ಎಂದು ತನಿಖೆಯ ವೇಳೆ ರಾಜು ಕಾಸೆರಾ ಹೇಳಿರುವುದು ವರದಿಯಾಗಿದೆ. ಬೆದರಿಕೆ ಹಾಗೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅಪ್ರಾಪ್ತ ವಯಸ್ಸಿನ ಮಗಳ ಮದುವೆ ಮಾಡಿಕೊಡಲು ಪೋಷಕರು ಒಪ್ಪಿಕೊಂಡಿದ್ದಾರೆ.

    ಬುಧವಾರ ರಾತ್ರಿ (ಡಿ.07) ರಾತ್ರಿ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ ಮದುವೆಯ ಪೆಂಡಲ್ ಹಾಕಲು ಬಂದಿದ್ದ ಕಾರ್ಮಿಕನೊಬ್ಬ ಈತ ಸಂಜಯ್ ಕಸೇರಾ ಅಲ್ಲ, ಅಸ್ಲಾಮ್ ಖಾನ್. ಈತ ಅಪರಾಧವೊಂದರಲ್ಲಿ ಜೈಲು ಸೇರಿದ್ದು, ಇದೀಗ ಹೊರಬಂದಿದ್ದಾನೆ ಎಂದು ಹೇಳಿದ್ದಾನೆ. ಇದರಿಂದಾಗಿ ಅಸ್ಲಾಮ್ ಖಾನ್​ನ ಕರಾಳ ಮುಖ ಬಯಲಾಗಿದೆ.

    ಈತನ ನಿಜಬಣ್ಣ ಗೊತ್ತಾಗುತ್ತಿದ್ದಂತೆ ಮದುವೆ ಬಂದಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಲಪಂಥೀಯ ಸಂಘಟನೆ, ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

    ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಇದನ್ನು ಲವ್ ಜಿಹಾದ್ ಎಂದು ಕರೆದಿರುವ ಬಜರಂಗದಳದ ಜಿಲ್ಲಾ ಮುಖಂಡ ಅಜಿತ್ ಪಾಂಡೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts