More

    ಪ್ರಿಯತಮೆ ರಕ್ಷಿಸಲು 4 ಹುಲಿಗಳೊಂದಿಗೆ ಏಕಾಂಗಿಯಾಗಿ ಹೋರಾಟ; ಹೆಚ್ಚು ಟ್ರೋಲ್ ಆಗುತ್ತಿರುವ ವಿಡಿಯೋವಿದು

    ಬೆಂಗಳೂರು: ಚಿತ್ರದಲ್ಲಿ ಒಬ್ಬ ನಾಯಕ ತನ್ನ ಪ್ರಿಯತಮೆಯ ಜೀವವನ್ನು ಉಳಿಸಲು ಇಡೀ ಜಗತ್ತೇ ಎದುರಾದರೂ ಏಕಾಂಗಿಯಾಗಿ ಹೋರಾಡುತ್ತಾನೆ ಎಂದು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ತೋರಿಸಲಾಗುತ್ತದೆ. ಈ ಹಿಂದಿನ ಅನೇಕ ಚಿತ್ರಗಳಲ್ಲೂ ಸ್ಕ್ರಿಪ್ಟ್‌ಗಳನ್ನು ಅದೇ ರೀತಿಯಲ್ಲಿ ಬರೆಯಲಾಗಿದೆ. ನಾಯಕ ಯಾವಾಗಲೂ ಗೆಲ್ಲುತ್ತಾನೆ. ಸತ್ತರೂ, ಅವನನ್ನು ಕೆಲವು ಪವಾಡದಿಂದ ಮತ್ತೆ ಬದುಕಿಸಲಾಗುತ್ತದೆ. ಅಂದಹಾಗೆ ಈ ಚಿತ್ರದಲ್ಲಿಯೂ ನಾಯಕನಿಗೆ ಏನೂ ಕಷ್ಟವಾಗುವುದಿಲ್ಲ. ತನ್ನ ನಾಯಕಿಗಾಗಿ ದೊಡ್ಡ ಗೂಂಡಾಗಳೊಂದಿಗೆ ಅಥವಾ ಕಾಡು ಪ್ರಾಣಿಗಳೊಂದಿಗೆ ಹೋರಾಡಿ ಅವಳನ್ನು ಉಳಿಸುತ್ತಾನೆ.

    ಇಂತಹ ಸಾಹಸ ದೃಶ್ಯವನ್ನು ನೀವು ನೋಡಿರಲಿಕ್ಕಿಲ್ಲ! 
    ಚಿತ್ರವೊಂದರ ಇಂತಹ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಜನರು ನಾಯಕನಿಂದ ಚಿತ್ರದವರೆಗೆ ಎಲ್ಲವನ್ನೂ ಗೇಲಿ ಮಾಡುತ್ತಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚಿತ್ರದ ನಾಯಕ ಜಂಗಲ್ ಸಫಾರಿಗೆ ಭೇಟಿ ನೀಡಲು ಬಂದಿರುವುದನ್ನು ಕಾಣಬಹುದು. ಆಗ ಅವನ ಕಣ್ಣುಗಳು ಎಲ್ಲಾ ಕಡೆಯಿಂದ ಹುಲಿಗಳಿಂದ ಸುತ್ತುವರಿದ ಸುಂದರ ಹುಡುಗಿಯ ಮೇಲೆ ಬೀಳುತ್ತವೆ. ಹುಲಿಗಳು ನಿರಂತರವಾಗಿ ಅವಳ ಮೇಲೆ ದಾಳಿ ಮಾಡುತ್ತಿವೆ. ಆದರೆ ಅವಳು ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ.

    ಆಗ ನಾಯಕ ಪ್ರವೇಶಿಸುತ್ತಾನೆ. ತಕ್ಷಣವೇ ಹುಡುಗಿಯ ಬಳಿ ತೆರಳುತ್ತಾನೆ ಮತ್ತು ಎಲ್ಲಾ ಹುಲಿಗಳೊಂದಿಗೆ ಹೋರಾಡಲು ಪ್ರಾರಂಭಿಸುತ್ತಾನೆ. ಒಟ್ಟು 4 ಹುಲಿಗಳಿವೆ. ಅವನು ಎಲ್ಲವನ್ನೂ ಕೊಲ್ಲುತ್ತಾನೆ. ಆದರೆ, ಚಿತ್ರದಲ್ಲಿ ತೋರಿಸಿರುವ ಹುಲಿಗಳು ನಿಜವಲ್ಲ. ಬದಲಿಗೆ, ಹುಲಿಯಂತೆ ಧರಿಸಿರುವ ಮನುಷ್ಯ. ಚಿತ್ರದ ಈ ದೃಶ್ಯವನ್ನು ನೋಡಿದ ಜನರು ನಾಯಕನಿಂದ ಹಿಡಿದು ನಿರ್ದೇಶಕರವರೆಗೆ ಎಲ್ಲರನ್ನೂ ಟ್ರೋಲ್ ಮಾಡುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ 
    @TheFigen_ ಹೆಸರಿನ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಚತುರ್ ಹೆಸರಿನ ಪೇಜ್​​​​ನಲ್ಲಿ ಮೊದಲು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಳಿಕ ಆ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಬರೆಯುವ ತನಕ 5 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಮಂದಿ ಇದನ್ನು ಲೈಕ್ ಮಾಡಿದ್ದಾರೆ.

    ರಾಮನ ವಿಗ್ರಹದ ಫೋಟೋ ಹಂಚಿಕೊಂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಂತಸ ವ್ಯಕ್ತಪಡಿಸಿದ್ದು ಹೀಗೆ…

    ಬಿಲ್ಕಿಸ್ ಬಾನು ಕೇಸ್: ಜ.21ರೊಳಗೆ ಅಪರಾಧಿಗಳು ಶರಣಾಗಲು ಆದೇಶ; ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts