More

    ಸುಮ್ಮಸುಮ್ಮನೆ ಜೊಮ್ಯಾಟೋ ಹೆಸರನ್ನು ಉಲ್ಲೇಖಿಸಿದ ಟ್ವಿಟರ್​ ಬಳಕೆದಾರನ ಪೇಚಾಟ; ಜೊಮ್ಯಾಟೋ ರಾಕ್​…ಆತ ಫುಲ್ ಶಾಕ್

    ಆನ್​​ಲೈನ್​ ಆಹಾರ ವಿತರಣಾ ಕಂಪನಿ ಜೊಮ್ಯಾಟೋ ನೆಟ್ಟಿಗರಿಂದ ಅಪಾರ ಪ್ರಶಂಸೆ ಪಡೆದಿದೆ. ಅದಕ್ಕೆ ಕಾರಣ ಟ್ವಿಟರ್​ ಬಳಕೆದಾರನೋರ್ವ ಮಾಡಿದ ಎಡವಟ್ಟು ಮತ್ತು ಅದಕ್ಕೆ ಜೊಮ್ಯಾಟೋ ನೀಡಿದ ಎಪಿಕ್​ ರಿಪ್ಲೈ.

    ಈ ಲಾಕ್​ಡೌನ್​ ಸಮಯದಲ್ಲಿ ಬಹುತೇಕ ಎಲ್ಲ ಕಂಪನಿಗಳೂ ಕೆಲಸ ನಿಲ್ಲಿಸಿವೆ. ಮನೆ ಬಾಗಿಲಿಗೆ ಫುಡ್ ಡಿಲೆವರಿಯನ್ನು ಬಂದ್ ಮಾಡಲಾಗಿದೆ. ಹೀಗಿರುವಾಗ ಟ್ವಿಟರ್​ ಬಳಕೆದಾರನೋರ್ವ ಸುಮ್ಮನೆ ಜೊಮ್ಯಾಟೋದ ಕಾಲೆಳೆದ. ಲಾಕ್​ಡೌನ್ ಪರಿಸ್ಥಿತಿ ಇರುವಾಗ ಜೊಮ್ಯಾಟೋ ಏನೂ ಮಾಡುತ್ತಿಲ್ಲ. ಅದೀಗ ಯೂಸ್​ಲೆಸ್ (ಯಾವುದಕ್ಕೂ ಉಪಯೋಗವಿಲ್ಲ) ಎಂದು ಟ್ವೀಟ್​ ಮಾಡಿದ. ಅದೂ ಕೂಡ ತನಗೆ ಹೋಲಿಸಿಕೊಂಡು.

    ಈ ಲಾಕ್​ಡೌನ್​ ಸಂದರ್ಭದಲ್ಲಿ ನಮ್ಮ ಫೋನ್​​ನಲ್ಲಿ ಇರುವ ಜೊಮ್ಯಾಟೋ ಹೇಗೆ ಅನುಪಯುಕ್ತವೋ ಹಾಗೇ ನಾನೂ ಕೂಡ ಯೂಸ್​ಲೆಸ್ ಎಂದು ನನ್ನ ತಂದೆ ತಾಯಿ ಭಾವಿಸುತ್ತಾರೆ. ನನ್ನ ಪಾಲಕರು ತುಂಬ ಬುದ್ಧಿವಂತರು ಎಂದು ಟ್ವೀಟ್​ ಮಾಡಿದ್ದ. ನನಗೂ ಕೆಲಸವಿಲ್ಲ, ಜೊಮ್ಯಾಟೋಕ್ಕೂ ಕೆಲಸವಿಲ್ಲ ಎಂದಿದ್ದ. ಹಾಗಂತ ಆತ ಜೊಮ್ಯಾಟೋವನ್ನು ಟ್ಯಾಗ್​ ಮಾಡಿರಲಿಲ್ಲ.
    ಆದರೆ ಈ ಟ್ವೀಟ್​ ಜೊಮ್ಯಾಟೋ ಕಂಪನಿಯ ಗಮನಕ್ಕೆ ಬಂದಿದೆ. ತನ್ನ ಅಧಿಕೃತ ಟ್ವಿಟರ್​ ಖಾತೆ ಮೂಲಕ ಟ್ವೀಟ್​ ಮಾಡಿ ಆತನಿಗೆ ಪ್ರತಿಕ್ರಿಯೆ ನೀಡಿದೆ.

    ಲಾಕ್​ಡೌನ್ ಸಂದರ್ಭದಲ್ಲಿ ನಾವು ಸುಮ್ಮನೆ ಕುಳಿತಿಲ್ಲ, ನಾವೀಗ ಕಿರಾಣಿ ಸಾಮಗ್ರಿಗಳನ್ನು ಜನರಿಗೆ ವಿತರಿಸುತ್ತಿದ್ದೇವೆ. ನೀವು ನಿಮ್ಮದನ್ನ ನೋಡಿಕೊಳ್ಳಿ ಎಂದು, ಒಂದು ಪ್ರೀತಿಯ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದೆ. ಅಂದರೆ ನಮಗೆ ಕೆಲಸವಿದೆ, ನೀವು ನಿಮ್ಮ ಕೆಲಸದ ಬಗ್ಗೆ ಯೋಚಿಸಿಕೊಳ್ಳಿ ಎಂದು ಹೇಳಿದೆ.

    ಜೊಮ್ಯಾಟೋದ ಈ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.  ಬಹುಶಃ ಆ ವ್ಯಕ್ತಿ ಜೊಮ್ಯಾಟೋ ರಿಪ್ಲೈ ಮಾಡುತ್ತದೆ ಎಂದುಕೊಂಡಿರಲಿಲ್ಲ. ಬಳಿಕ ಜೊಮ್ಯಾಟೋದ ಟ್ವೀಟ್​ ಸಿಕ್ಕಾಪಟೆ ವೈರಲ್ ಆಗುತ್ತಿದ್ದಂತೆ ಆತ ತಾನು ಮಾಡಿದ ಟ್ವೀಟನ್ನು ಡಿಲೀಟ್​ ಮಾಡಿದ್ದಾನೆ.

    ಕರೊನಾ ವೈರಸ್​ ಆತಂಕದ ಹಿನ್ನೆಲೆಯಲ್ಲಿ ಮನೆಮನೆಗೆ ಆಹಾರ ವಿತರಣೆ ನಿಲ್ಲಿಸಿದ ಜೊಮ್ಯಾಟೋ ಇತ್ತೀಚೆಗೆ ಅಕ್ಕಿ, ಬೇಳೆಯಂತಹ ರೇಷನ್​ಗಳನ್ನು ವಿತರಿಸುತ್ತಿದೆ. ಅದು ಗೊತ್ತಿಲ್ಲದ ಯುವಕ ಹೀಗೆ ಸುಮ್ಮನೆ ಟ್ವೀಟ್​ ಮಾಡಿ ಪೇಚಿಗೆ ಸಿಲುಕಿದ.
    ಜೊಮ್ಯಾಟೋದ ಟ್ವೀಟ್​ ನೋಡಿದ ನೆಟ್ಟಿಗರು ಸಿಕ್ಕಾಪಟೆ ಹೊಗಳಿದ್ದಾರೆ. ಇದಕ್ಕಿಂತ ಒಳ್ಳೆ ರಿಪ್ಲೈ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​) 

     

    ಸುಮ್ಮಸುಮ್ಮನೆ ಜೊಮ್ಯಾಟೋ ಹೆಸರನ್ನು ಉಲ್ಲೇಖಿಸಿದ ಟ್ವಿಟರ್​ ಬಳಕೆದಾರನ ಪೇಚಾಟ; ಜೊಮ್ಯಾಟೋ ರಾಕ್​...ಆತ ಫುಲ್ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts