More

    ಜೀವಂತ ಮೂರು ಗುಂಡು ಜೇಬಿನಲ್ಲಿಟ್ಟುಕೊಂಡು ಸಂಸತ್ತಿನ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದವನು ಪೊಲೀಸ್​ ವಶಕ್ಕೆ

    ನವದೆಹಲಿ: ಜೀವಂತ ಮೂರು ಗುಂಡುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂಸತ್ತಿನ ಆವರಣದೊಳಗೆ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ 44 ವರ್ಷದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

    ಪಾರ್ಲಿಮೆಂಟಿನ ಗೇಟ್​ ನಂ. 8ರಿಂದ ಹಾಗೆ ನುಸುಳಲು ಯತ್ನಿಸಿದವನನ್ನು ಅಖ್ತರ್​ ಖಾನ್​ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತನ ಜೇಬಿನಲ್ಲಿ 0.32 ಬೋರ್​ ಮಾದರಿಯ ಮೂರು ಜೀವಂತ ಗುಂಡುಗಳನ್ನು ಇಟ್ಟುಕೊಂಡಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ. ಆತನನ್ನು ಈ ಬಗ್ಗೆ ವಿಚಾರಿಸಿದಾಗ ತಾನೂ ಪಾರ್ಲಿಮೆಂಟ್​ಗೆ ಬರುವಾಗ ಅವುಗಳನ್ನು ತೆಗೆದಿರಿಸಲು ಮರೆತು ಬಿಟ್ಟೆ ಎಂದಿದ್ದಾನೆ.

    ಪೊಲೀಸ್​ ವಶದಲ್ಲಿರುವ ಅಖ್ತರ್ ಖಾನ್, ಶಬೀರ್ ಖಾನ್ ಎಂಬುವವರ ಪುತ್ರ. ಈತ ಉತ್ತರ ಪ್ರದೇಶದ ಗಜಿಯಾಬಾದ್ ಜಿಲ್ಲೆಯ ಗಡಿ ಭಾಗದ ನಿವಾಸಿ.

    ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಸಂಸತ್ತಿನಲ್ಲಿ ಪ್ರವೇಶಿಸಲು ಅಕ್ತರ್​ಖಾನ್​ ಸಂದರ್ಶಕರ ಅಧಿಕೃತ ಪಾಸ್ ಹೊಂದಿದ್ದ.

    ಪೊಲೀಸರು ಆಥವಾ ದಾಖಲಾತಿಗಳನ್ನು ಪರಿಶೀಲಿಸಿದರು. ಎಲ್ಲ ಸರಿಯಾಗಿದ್ದು, ಆತ ಅಧಿಕೃತವಾಗಿ ಶಸ್ತ್ರ ಇಟ್ಟುಕೊಳ್ಳಲು ಲೈಸೆನ್ಸ್​ ಪಡೆದಿದ್ದಾನೆ. ಅಲ್ಲದೆ ಜೇಬಿನಲ್ಲಿರುವ ಬುಲೆಟ್​ಗಳನ್ನು ಮರೆತು ತಂದಿದ್ದೇನೆ ಎಂದಿದ್ದಾನೆ. ಹಾಗಾಗಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts