More

    ಬರ್ತ್​ಡೇ ಪಾರ್ಟಿಗೆಂದು 8 ವರ್ಷದ ಸೋದರಸಂಬಂಧಿಯನ್ನು ಕರೆದೊಯ್ದ ವ್ಯಕ್ತಿಯಿಂದ ಕ್ಷಮೆ ಇರದ ನೀಚ ಕೃತ್ಯ

    ಬ್ಯೂನಸ್ ಐರಿಸ್(ಅರ್ಜೆಂಟೀನಾ): ಎಂಟು ವರ್ಷದ ತನ್ನ ಸೋದರಸಂಬಂಧಿ ಬಾಲಕಿಯನ್ನೇ ಕೊಲೆ ಮಾಡಿದ ಆರೋಪದಲ್ಲಿ 22 ವರ್ಷದ ವ್ಯಕ್ತಿಯೊಬ್ಬನನ್ನು ಅರ್ಜೆಂಟೀನಾ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಸೆರ್ಗಿಯೋ ರಾಮನ್​ ಒಲಿವೈರಾ ಬಂಧಿತ ಆರೋಪಿ. ಈತನನ್ನು ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್​ ಪ್ರಾಂತ್ಯದ ಲೊಬೊಸ್​ ನಗರದಲ್ಲಿ ಸೋಮವಾರ ಬಂಧಿಸಲಾಗಿದೆ. ಸೋದರ ಸಂಬಂಧಿ 8 ವರ್ಷದ ಗೌಡಲುಪೆ ಎಜೈಜಾ ಬಾಲಕಿಯನ್ನು ಅತ್ಯಾಚಾರ ಮಾಡಿದ ಬಳಿಕ ಆಕೆಗೆ ಥಳಿಸಿ ಸುಟ್ಟುಹಾಕಿದ್ದಾನೆ ಎಂದು ಹೇಳಲಾಗಿದೆ. ಅಪಾರ್ಟ್​ಮೆಂಟ್​ ಗೋಡೆಯೊಂದರ ಬಳಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ ಆರೋಪಿ ಒಲಿವೈರಾ, ಪರಾಗ್ವಾನ್​ ರಾಷ್ಟ್ರದವನಾಗಿದ್ದು, ಭಾನುವಾರ ಸಂತ್ರಸ್ತೆ ಎಜೈಜಾ ಮನೆಗೆ ಬಂದಿದ್ದ. ಎಜೈಜಾಳನ್ನು ತಾಯಿಯ ಒಪ್ಪಿಗೆ ಪಡೆದು ಬರ್ತ್​ಡೇ ಪಾರ್ಟಿಗೆಂದು ಕರೆದೊಯ್ದಿದ್ದ. ತನ್ನ ಮಗಳು ಬರುವುದಾಗಿ ಹೇಳಿದ್ದ. ಬಳಿಕ ಮತ್ತೊಂದು ಸಂಬಂಧಿಕರ ಮನೆಯಲ್ಲಿದ್ದ ತನ್ನ ಮಗಳನ್ನು ಕರೆದೊಯ್ಯದೆ ಎಜೈಜಾ ಒಬ್ಬಳನ್ನೇ ಅಪಾರ್ಟ್​ಮೆಂಟ್​ಗೆ ಕೊರೆದೊಯ್ದಿದ್ದ.

    ಕೊಲೆ ತನಿಖೆಯ ಪ್ರಮುಖ ಪ್ರಾಸಿಕ್ಯೂಟರ್ ಪೆಟ್ರೀಷಿಯಾ ಹಾರ್ಟೆಲ್ ಮಾತನಾಡಿ, ಆರೋಪಿ ಒಲಿವೈರಾ, ಎಜೈಜಾ ಮೇಲೆ ದಾಳಿ ಮಾಡಿ ಥಳಿಸಿದ ಸಮಯದಲ್ಲಿ ಎಜೈಜಾ ಆರೋಪಿಯ ಮೈಯನ್ನು ಪರಚಿದ್ದಾಳೆ. ಆದರೂ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ಬಳಿಕ ಆಕೆಯನ್ನು ಕೊಲೆಗೈದು ಸಾಕ್ಷ್ಯಾ ನಾಶಕ್ಕಾಗಿ ಮೃತದೇಹವನ್ನು ಸ್ಟೌ ಮೇಲೆ ಇಟ್ಟು ಪಕ್ಕದಲ್ಲಿ ಗ್ಯಾಸ್​ ಟ್ಯಾಂಕರ್​ ಇರಿಸಿ ಅಪಾರ್ಟ್​ಮೆಂಟ್​ಗೆ ಬೆಂಕಿ ಹಚ್ಚಿದ್ದಾನೆ. ಇದಕ್ಕೂ ಮುನ್ನ ಎಜೈಜಾ ಮೇಲೆ ಆರೋಪಿ ಒಂದು ಬಾರಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಆಕೆ ರಕ್ಷಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನು ನಡೆಸಿದ್ದಾಳೆ ಎಂದು ಪೆಟ್ರೀಷಿಯಾ ಹಾರ್ಟೆಲ್ ಮಾಹಿತಿ ನೀಡಿದ್ದಾರೆ.

    ಸದ್ಯ ಬಂಧನವಾಗಿರುವ ಒಲೈವರಾ ಪೊಲೀಸರು ಕೇಳುವ ಯಾವುದೇ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ. ಆದರೆ ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts