More

    ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 24 ತಾಸು ಚುನಾವಣಾ ಪ್ರಚಾರ ಮಾಡುವಂತಿಲ್ಲ!

    ಕೋಲ್ಕತ: ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಗೆ ಪ್ರತಿಷ್ಠೆಯಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಈಗಾಗಲೇ ನಾಲ್ಕು ಹಂತದ ಮತದಾನ ಮುಗಿದಿದ್ದು, ಇನ್ನು ನಾಲ್ಕು ಹಂತಗಳು ಬಾಕಿ ಇವೆ.

    ಇದರ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ತಾಸು ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಇದು ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ಅನ್ವಯವಾಗಲಿದೆ.

    ಇದನ್ನೂ ಓದಿರಿ: 3 ವರ್ಷದ ಬಾಲಕನಿಗೆ ತಂಪು ಪಾನೀಯದ ಜತೆ ಮದ್ಯ ಬೆರೆಸಿ ಕುಡಿಸಿದ್ರು; 2 ಗಂಟೆ ಕಾಲ ಪ್ರಜ್ಞಾಹೀನನಾದ…

    ಕೇಂದ್ರೀಯ ಪಡೆಗಳ ವಿರುದ್ಧದ ಆರೋಪಿಸಿ ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿರುವುದು ಮತ್ತು ಧರ್ಮದ ಕುರಿತು ನೀಡಿರುವ ಪ್ರಚೋದನಕಾರಿ ಹೇಳಿಕೆಯು ಮಾದರಿ ನೀತಿ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

    ಆದರೆ, ಇದನ್ನು ಟ್ವೀಟ್​ ಮೂಲಕ ಖಂಡಿಸಿರುವ ಮಮತಾ, ಅಸಂವಿಧಾನಿಕ ನಿರ್ಧಾರ ತೆಗೆದುಕೊಂಡಿರುವ ಚುನಾವಣಾ ಆಯೋಗದ ವಿರುದ್ಧ ಕೋಲ್ಕತದ ಗಾಂಧಿ ಮೂರ್ತಿಯಲ್ಲಿ ಮಂಗಳವಾರ ಮಧ್ಯಾಹ್ನ 12ರಿಂದ ನಿರ್ಬಂಧ ವಾಪಸು ಪಡೆಯುವರೆಗೂ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಸೃಷ್ಟಿಯಲ್ಲಿ ನವಚೇತನ; ಯುಗಾದಿ ಕುರಿತ ಲೇಖನ

    ಸಂಕಷ್ಟ ಕರಗಲಿ; ಜಗತ್ತು ಕರೊನಾ ಮಹಾಮಾರಿಯಿಂದ ಮುಕ್ತವಾಗಬೇಕಿದೆ…

    ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ; ನಾಳೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts