More

    VIDEO | ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ ಮಾಲ್ಗುಡಿ ಡೇಸ್​ ಅಫೀಷಿಯಲ್ ಟೀಸರ್ ಬಿಡುಗಡೆ| ಫೆ.7 ಕ್ಕೆ ಸಿನಿಮಾ ತೆರೆಕಾಣುವ ನಿರೀಕ್ಷೆ

    ಬೆಂಗಳೂರು: ಮಾಲ್ಗುಡಿ ಡೇಸ್ ಎಂದಾಕ್ಷಣ ನೆನಪಾಗುವುದು ಆರ್​.ಕೆ.ನಾರಾಯಣ್. ಇವರ ಜತೆಗೆ ಕನ್ನಡಿಗರಿಗೆ ನೆನಪಾಗುವುದು ಶಂಕರ್​ನಾಗ್​. ಹೌದು.. ಮಾಲ್ಗುಡಿ ಡೇಸ್​ ಹೆಸರಿನ ಸಿನಿಮಾ ಚಿತ್ರೀಕರಣವಾಗುತ್ತಿದ್ದು, ಇದರ ಅಫೀಷಿಯಲ್​ ಟೀಸರ್ ಶುಕ್ರವಾರ ಬಿಡುಗಡೆಯಾಗಿದ್ದು. ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸಿದೆ.

    ಟೀಸರ್​ನಲ್ಲಿ ಮಾಲ್ಗುಡಿ ಡೇಸ್​ -ಮಾಲ್ಗುಡಿ ಡೇಸ್ ಎಂಬ ಹಾಡು ಇದ್ದು, ವಿಜಯರಾಘವೇಂದ್ರ ಅವರೂ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್​ ಭಿನ್ನವಾಗಿದ್ದು ಗಮನಸೆಳೆದಿದೆ.

    ಈ ಸಿನಿಮಾ 65 ವರ್ಷದ ಲೇಖಕ ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬುವವರು ನಿವೃತ್ತಿ ನಂತರದ ಬದುಕಿನ ಚಿತ್ರಣವನ್ನು ಹೊಂದಿದೆ. ಬಾಕಿ ಕೆಲಸಗಳನ್ನು ಪೂರೈಸಬೇಕೆಂಬ ಬಯಕೆ ಆತನ ಬದುಕಿನಲ್ಲಿ ಸೃಷ್ಟಿಸುವ ಘಟನಾವಳಿಗಳ ಚಿತ್ರಣ ಇದರಲ್ಲಿದೆ. ಅದೇನು, ಎತ್ತ ಹೇಗೆ ಕಥೆ ಹೆಣೆದುಕೊಂಡಿದೆ ಎಂಬ ಕುತೂಹಲವನ್ನು ಸೃಷ್ಟಿಸಿದೆ.

    ಈ ಚಿತ್ರ ಫೆಬ್ರವರಿ 7ರಂದು ತೆರೆಕಾಣಲಿದೆ. ಕಥೆ ಮತ್ತು ನಿರ್ದೇಶನ ಕಿಶೋರ್ ಮೂಡಬಿದ್ರಿ ಅವರದ್ದಾಗಿದೆ. ಸ್ವಯಂಪ್ರಭಾ ಎಂಟರ್​ಟೇನ್​ಮೆಂಟ್​ ಆ್ಯಂಡ್ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts