More

    ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿ

    ಸೊರಬ: ಮಕ್ಕಳಿಗೆ ಆಸ್ತಿ ಮಾಡದೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಪುರಸಭೆ ಸದಸ್ಯ ಈರೇಶ್ ಮೇಸಿ ಹೇಳಿದರು.
    ಶುಕ್ರವಾರ ಪಟ್ಟಣದ ಕಾನಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಿಣ್ಣರ ಹಬ್ಬ ಉದ್ಘಾಟಿಸಿ ಅವರು ಮಾತನಾಡಿ, ಪಟ್ಟಣದಲ್ಲಿನ ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ಹೆಮ್ಮಯ ಸಂಗತಿ. ಇಲ್ಲಿಯ ಉತ್ತಮ ಶಿಕ್ಷಕರ ಶ್ರಮದಿಂದಾಗಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ಒಳ್ಳೆಯ ದಿಕ್ಕಿನಡೆ ಸಾಗುತ್ತಿದೆ ಎಂದರು.
    ಈ ಶಾಲೆಯಲ್ಲಿ ಇನ್ನು ಹೆಚ್ಚಿನ ತರಗತಿಗಳು ನಡೆಯುವಂತೆ ಸೇರ್ಪಡೆಗೊಳಿಸಲು ಅನುಕೂಲಕರ ವಾತಾವರಣ ಹಾಗೂ ಮೂಲ ಸೌಕರ್ಯಗಳು ಇವೆ. ಹೆಚ್ಚಿನ ಸೌವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಹಕಾರಿ ಅಗಲಿದೆೆ ಎಂದು ಹೇಳಿದರು.
    ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನಂಜುಂಡಪ್ಪ, ಸಮೂಹ ಸಂಪನ್ಮೂಲ ಅಧಿಕಾರಿ ಸುಧಾ, ಮಾಜಿ ಪಪಂ ಅಧ್ಯಕ್ಷ ಪ್ರಶಾಂತ್ ಮೇಸಿ, ಸದಸ್ಯ ಮಧುರಾಯ ಜಿ.ಶೇಟ್, ಜಯಲಕ್ಷ್ಮೀ, ರಾಜು ಹಿರಿಯವಲಿ, ಸುಜಾತಾ ಜೋತಾಡಿ, ಮುಖ್ಯ ಶಿಕ್ಷಕ ಷಣ್ಮುಖಾಚಾರ್, ಶಿಕ್ಷಕಿಯರಾದ ಭಾಗ್ಯ, ರಾಜೇಶ್ವರಿ, ಕಾವ್ಯಾ, ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts