More

    ಮೈಮುಲ್​ ಚುನಾವಣೆ: ಮತದಾನ ಕೇಂದ್ರದಲ್ಲೇ ಎಚ್​ಡಿಕೆ v/s ಜಿಟಿಡಿ ಬೆಂಬಲಿಗರ ನಡುವೆ ಗಲಾಟೆ

    ಮೈಸೂರು: ಪ್ರತಿಷ್ಠೆಯ ಕಣವಾದ ಮೈಮುಲ್(ಮೈಸೂರು ಜಿಲ್ಲಾ ಹಾಲು ಉತ್ಪಾದಕ ಸಂಘಗಳ ಒಕ್ಕೂಟ) ಚುನಾವಣೆಯ ಮತದಾನ ಮೈಸೂರಿನ ಮೆಗಾ ಡೈರಿ ಆವರಣದಲ್ಲಿ ಇಂದು ಬೆಳಗ್ಗೆ 9ಕ್ಕೆ ಆರಂಭವಾಗಿದ್ದು, ಮತದಾನ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಮತದಾನ ಕೇಂದ್ರದ ಒಳಗಡೆ ಮತ್ತು ಹೊರಗಡೆ ಮಾತಿನ ಚಕಮಕಿ ನಡೆದಿದೆ.

    ಎಂಡಿಸಿಸಿ ಉಪಾಧ್ಯಕ್ಷ ಸದಾನಂದ ಮತ್ತು ಮಾಜಿ ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾಜಿ ಸಿಎಂ ಎಚ್.ಡಿ‌. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣದ ಕಾರ್ಯಕರ್ತರ ಪರಸ್ಪರ ಕೂಗಾಟ-ರಂಪಾಟ ನಡೆಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ನಡೆಯಲಿದೆ.

    ಮೈಮುಲ್​ ಚುನಾವಣೆ ಮಾಜಿ ಸಿಎಂ ಎಚ್​ಡಿಕೆ ಹಾಗೂ ಮಾಜಿ ಸಚಿವ ಜಿಟಿಡಿ ಅವರಿಗೆ ಪ್ರತಿಷ್ಠೆಯ ಅಖಾಡವಾಗಿದೆ. ಜೆಡಿಎಸ್‌ನಲ್ಲೇ ಎರಡು ಬಣವಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಜೆಡಿಎಸ್ ವರ್ಸಸ್ ಜೆಡಿಎಸ್‌ ನಡುವೆಯೇ ಫೈಟ್ ಇರುವುದರಿಂದ ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ.

    ಇನ್ನು ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ನೇರವಾಗಿ ಭಾಗಿಯಾದ ಮಾಜಿ ಸಿಎಂ ಎಚ್‌ಡಿಕೆ‌, ಜಿ.ಟಿ.ದೇವೇಗೌಡ ವಿರುದ್ಧ ನಮ್ಮ ತಂಡದ ಸ್ಪರ್ಧೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಜೆಡಿಎಸ್ ಕಾರ್ಯಕರ್ತರ ವಿರುದ್ಧವೇ ಎಚ್‌ಡಿಕೆ ಪ್ರಚಾರ ಮಾಡಿದ್ದಾರೆ. ಇತ್ತ ಎಚ್‌ಡಿಕೆ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ ಜಿಟಿಡಿ. ವಿಜಯಮಾಲೆ ಯಾರ ಕೊರಳಿಗೆ ಹೋಗಲಿದೆ ಎಂದು ಸಂಜೆ ಬಳಿಕ ಗೊತ್ತಾಗಲಿದೆ.

    ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

    ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts