More

    ಕೇಂದ್ರದ ಅನುದಾನದಡಿ ಅಭಿವೃದ್ಧಿ ಕಾರ್ಯ

    ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ತಂದಿದ್ದಾರೆ. ಪ್ರಧಾನ ಮಂತ್ರಿ ಅವರ ಕನಸಿನ ಯೋಜನೆ ವಿಕಸಿತ ಭಾರತದ ಪರಿಕಲ್ಪನೆ ಅಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

    ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಿವಿಧ ವಾರ್ಡ್​ಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.

    ಕೋವಿಡ್ ಮಹಾಮಾರಿಯಿಂದ ಇಡೀ ವಿಶ್ವವೇ ಸಂಕಷ್ಟ ಎದುರಿಸಿತ್ತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿದರು. ಅಷ್ಟೇ ಅಲ್ಲದೇ, ವಿದೇಶಗಳಿಗೂ ಲಸಿಕೆ ವಿತರಿಸಿದರು ಎಂದರು.

    ಮೇಕ್ ಇನ್ ಇಂಡಿಯಾ, ಉಜ್ವಲ ಯೋಜನೆ, ಜನ್​ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ, ಬೆಳೆ ವಿಮೆ ಸೇರಿದಂತೆ 400 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಕಳೆದ 9 ವರ್ಷದಲ್ಲಿ ಜಾರಿಗೊಳಿಸಿದ್ದಾರೆ ಎಂದರು.

    ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಲೋಕಸಭೆ ಕ್ಷೇತ್ರದಾದ್ಯಂತ ಈ ಎಲ್ಲ ಯೋಜನೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂಬರುವ ಚುನಾವಣೆಯಲ್ಲಿಯೂ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡಿದರು.

    ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಉಮೇಶಗೌಡ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಸೀಮಾ ಸಿದ್ದು ಮೋಗಲಿಶೆಟ್ಟರ, ಬೀರಪ್ಪ ಖಂಡೆಕರ, ಕೃಷ್ಣಾ ಗಂಡಗಾಳೇಕರ, ಮುಕುಂದಗೌಡ ಗುಗ್ಗರಿ, ಪ್ರಕಾಶ ಕ್ಯಾರಕಟ್ಟಿ, ರವಿ ನಾಯಕ, ಎಚ್.ಎಸ್. ಕಿರಣ, ಅಶೋಕ ವಾಲ್ಮೀಕಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts