More

    ಮಹಾವೀರ ಜಯಂತಿ ಆಚರಣೆ ಸಂಭ್ರಮ

    ಕಳಸ: ಕಳಸ ಮತ್ತು ಸಂಸೆಯಲ್ಲಿ ಭಗವಾನ್ ಮಹಾವೀರ ತೀರ್ಥಂಕರರ 2623ನೇ ಜಯಂತಿಯನ್ನು ಜೈನ ಸಮಾಜದವರು ಸಂಭ್ರಮದಿಂದ ಆಚರಿಸಿದರು.

    ಭಾನುವಾರ ಬೆಳಗ್ಗೆ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಹೂಗಳಿಂದ ಸಿಂಗರಿಸಲ್ಪಟ್ಟ ತೆರೆದ ವಾಹನದಲ್ಲಿ ಮಹಾವೀರ ಸ್ವಾಮಿ ವಿಗ್ರಹವನ್ನು ಕುಳ್ಳಿರಿಸಿ ಕಳಸ ಚಂದ್ರನಾಥ ಸ್ವಾಮಿ ಬಸದಿಯವರೆಗೆ ಮೆರವಣಿಗೆ ಮಾಡಲಾಯಿತು.
    ಮೆರವಣಿಗೆ ಉದ್ದಕ್ಕೂ ಚಂಡೆ, ಭಜನಾ ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ಜೈನ ಸಮುದಾಯದ ನೂರಾರು ಶ್ರಾವಕ ಶ್ರಾವಕಿಯರು ಶ್ವೇತ ವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂತರ ಕಳಸ ಚಂದ್ರನಾಥ ಬಸದಿಯಲ್ಲಿ ಮಹಾವೀರ ಸ್ವಾಮಿಗೆ 54 ಕಳಸಗಳ ವಿಶೇಷ ಅಭಿಷೇಕ, ಪೂಜೆಗಳು ನಡೆಯಿತು. ಮಧ್ಯಾಹ್ನ ಮಂಗಳೂರು ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
    ಸಂಸೆಯಲ್ಲೂ ನೂರಾರು ಶ್ರಾವಕ ಶ್ರಾವಕಿಯರ ಸಮ್ಮುಖದಲ್ಲಿ ಶ್ರೀ ಮಹಾವೀರ ಸ್ವಾಮಿಯ ಲಾಲಿಕೆ ಪಲ್ಲಕಿ ಭಜನೆಯೊಂದಿಗೆ ವೈಭವಯುತ ಮೆರವಣಿಗೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts