More

    ಮಹರ್ಷಿ ವಾಲ್ಮೀಕಿ ಪ್ರತಿಪಾದಿಸಿದ ಮೌಲ್ಯಗಳು ಎಂದಿಗೂ ಪ್ರಸ್ತುತ

    ಮೂಡಲಗಿ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಕಾರ್ಯಾಲಯ ಮೂಡಲಗಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗೋಕಾಕ ಹಾಗೂ ವಾಲ್ಮೀಕಿ ಸಮುದಾಯದ ಆಶ್ರಯದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

    ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಗುಜಗೊಂಡ ಮಾತನಾಡಿ, ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಪ್ರತಿಪಾದಿಸಿದ ಮೌಲ್ಯಗಳು ಎಂದಿಗೂ ಪ್ರಸ್ತುತ ಎಂದರು.


    ತಹಸೀಲ್ದಾರ್ ಶಿವಾನಂದ ಬಬಲಿ ಮತ್ತು ಬಿಇಒ ಅಜಿತ ಮನ್ನಿಕೇರಿ ಮಾತನಾಡಿದರು. ತಾಪಂ ಇಒ ಎ್.ಜಿ. ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಹೆಸ್ಕಾಂ ಅಧಿಕಾರಿ ಎಂ.ಎಸ್.ನಾಗಣ್ಣವರ, ಪಿಎಸ್‌ಐ ಎಚ್.ವೈ.ಬಾಲದಂಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ್, ಯಲ್ಲಾಲಿಂಗ ವಾಳದ, ಸಿ.ಬಿ.ಪೂಜಾರಿ, ಮಲ್ಲಪ್ಪ ದಳವಾಯಿ, ಮಹಾಂತೇಶ ಭೈರನಟ್ಟಿ, ಆರ್.ಪಿ.ಸೋನವಾಲಕರ್, ಈರಪ್ಪ ಬನ್ನೂರು, ರಮೇಶ ಸಣ್ಣಕ್ಕಿ, ಶಾಬಪ್ಪ ಸಣ್ಣಕ್ಕಿ, ಮುಖ್ಯ ಶಿಕ್ಷಕ ಎ.ಜಿ.ಕೋಳಿ, ವಸತಿ ನಿಲಯದ ಮೇಲ್ವಿಚಾರಕ ಭರತೇಶ್ ಬೋಳಿ, ಗೋಕಾಕ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಎಸ್.ಕೆ.ಆಸಂಗಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts