More

    ಭಕ್ತರ ಸಂಭ್ರಮದ ನಡುವೆ ಮಹಾರಥೋತ್ಸವ

    ಕಮತಗಿ: ತತ್ವಜ್ಞಾನಿ, ಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವದಂಗವಾಗಿ ಬಾಗಲಕೋಟೆ ತಾಲೂಕಿನ ಬೆನಕಟ್ಟಿಯಲ್ಲಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಮಹಾರಥೋತ್ಸವ ನಡೆಯಿತು.

    ಬೆಳಗ್ಗೆ ಸುಪ್ರಭಾತ, 7 ಗಂಟೆಗೆ ವೇಮನರ ಮೂರ್ತಿಗೆ ಅಭಿಷೇಕ, ಪೂಜಾ ಕೈಂಕರ್ಯಗಳು ನಡೆದವು. 10 ಗಂಟೆಗೆ ವೇಮನರ ಉತ್ಸವ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಯುವಕ ಸಂಘಗಳ ಕೋಲಾಟ, ಡೊಳ್ಳು, ಬಾಜಾ ಭಜಂತ್ರಿ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ರಂಗು ನೀಡಿದವು. ಕಳಸದಾರತಿ ನೂರಾರು ಮಹಿಳೆಯರು ಮೆರವಣಿಗೆಗೆ ಸಾಥ್ ನೀಡಿದರು.

    ಸಂಜೆ 4 ಗಂಟೆಗೆ ಕಲಶದ ಮೆರವಣಿಗೆ ನಡೆಯಿತು. ನಂತರ ಮಹಾರಾಥೋತ್ಸವಕ್ಕೆ ಯರೇಹೊಸಳ್ಳಿಯ ರಡ್ಡಿಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ಚಾಲನೆ ನೀಡಿದರು.

    ರಥದ ಮೇಲೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಸಮರ್ಪಿಸಿ ಭಕ್ತಿಯ ಪರಾಕಾಷ್ಠ ಮೆರೆದರು. ಹಳ್ಳೂರು, ಬೇವೂರು, ಕಮತಗಿ, ಶಿರೂರು, ಹೊನ್ನಕಟ್ಟಿ, ಭಗವತಿ, ಬಸರಿಕಟ್ಟಿ ಸೇರಿ ವಿವಿಧ ಊರುಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts