More

    ನಾಲ್ಕೂವರೆ ವರ್ಷದಿಂದ ಡೇಟಿಂಗ್​: ಪ್ರೇಯಸಿ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದೇಕೆ ಪ್ರಿಯಕರ?

    ಮುಂಬೈ: ನಾಲ್ಕೂವರೆ ವರ್ಷದಿಂದ ಡೇಟಿಂಗ್​ನಲ್ಲಿದ್ದ ಪ್ರಿಯಕರ ತನ್ನ ಪ್ರಿಯೆಯ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಕಾರ್​ನ ಚಕ್ರ ಕಾಲಿನ ಮೇಲೆ ಹರಿದ ಪರಿಣಾಮ ಯುವತಿಯ ಕಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಇದನ್ನೂ ಓದಿ: ಯುಪಿಯಲ್ಲಿ ಆಲೂಗಡ್ಡೆ ಇಳುವರಿ ಬಂಪರ್: ಗ್ರಾಹಕರಿಗೆ ಸಿಹಿ – ರೈತರೇ ಎಚ್ಚರ..ಎಚ್ಚರ!

    ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಗಾಯಕ್ವಾಡ್ ಪುತ್ರ ಅಶ್ವಜಿತ್ ಗಾಯಕ್ವಾಡ್ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಲು ಯತ್ನಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

    ಸಂತ್ರಸ್ತೆ ಪ್ರಿಯಾ ಸಿಂಗ್ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಈ ಘಟನೆಯನ್ನು ಪೋಸ್ಟ್ ಮಾಡಿದ್ದಾಳೆ. ಡಿ.11 ರಂದು ಬೆಳಿಗ್ಗೆ 4 ಗಂಟೆಗೆ ಅಶ್ವಜಿತ್ ನನ್ನು ಕುಟುಂಬ ಸಮಾರಂಭದಲ್ಲಿ ಭೇಟಿಯಾಗಲು ಹೋಗಿದ್ದೆ. ಆಗ ಆತನನ್ನು ಪ್ರತ್ಯೇಕವಾಗಿ ಮಾತನಾಡಲು ವಿನಂತಿಸಿಕೊಂಡೆ. ಆತ ಹೊರಬಂದವನೆ ವಿಚಿತ್ರವಾಗಿ ವರ್ತಿಸಿದ. ತನ್ನ ಸ್ನೇಹಿತ(ಕಾರು ಚಾಲಕ)ನನ್ನು ಬಿಟ್ಟು ಅವಮಾನಿಸಲು ಮುಂದಾದ. ಆಕೆ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡರೂ, ಅಶ್ವಜಿತ್ ನನ್ನನ್ನು ಹೊಡೆಯಲು ಆರಂಭಿಸಿದ ಎಂದು ಆಕೆ ಬರೆದುಕೊಂಡಿದ್ದಾಳೆ.

    “ನನ್ನ ಗೆಳೆಯ ನನಗೆ ಕಪಾಳಮೋಕ್ಷ ಮಾಡಿ, ನನ್ನ ಕತ್ತು ಹಿಸುಕಲು ಪ್ರಯತ್ನಿಸಿದ. ನಾನು ಅವನನ್ನು ತಳ್ಳಲು ಪ್ರಯತ್ನಿಸಿದೆ, ಅವನು ನನ್ನ ಕೈಯನ್ನು ಕಚ್ಚಿದನು, ನನಗೆ ಹೊಡೆದನು, ನನ್ನ ಕೂದಲನ್ನು ಎಳೆದನು ಮತ್ತು ಅವನ ಸ್ನೇಹಿತನು ನನ್ನನ್ನು ನೆಲಕ್ಕೆ ತಳ್ಳಿದನು” ಎಂದು ಪ್ರಿಯಾ ಸಿಂಗ್ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹೇಳಿಕೊಂಡಿದ್ದಾಳೆ.

    ಕಡೆಗೆ ಅವರು ನನ್ನ ಫೋನ್ ಮತ್ತು ಬ್ಯಾಗ್ ಕಿತ್ತುಕೊಂಡರು. ಆಗ ಅವರಿಂದ ಅವುಗಳನ್ನು ಪಡೆದುಕೊಳ್ಳಲು ಯತ್ನಿಸಿದಾಗ ಅಶ್ವಜಿತ್ ಚಾಲಕನಿಗೆ ನನ್ನ ಮೇಲೆ ಕಾರು ಓಡಿಸಲು ಹೇಳಿದ. ಆತ ನನ್ನ ಕಾಲುಗಳ ಮೇಲೆ ಕಾರು ಹತ್ತಿಸಿ ಅಲ್ಲಿಂದ ಓಡಿಹೋದರು ಎಂದು ಆಕೆ ಹೇಳಿಕೊಂಡಿದ್ದಾರೆ.
    ಇದರ ಪರಿಣಾಮ “ನನ್ನ ಬಲಗಾಲು ಮುರಿದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಪ್ರಸ್ತುತ ಬಲಗಾಲಿಗೆ ರಾಡ್ ಹಾಕಿದ್ದು, ನನ್ನ ದೇಹದಾದ್ಯಂತ ಮೂಗೇಟುಗಳು, ನನ್ನ ಕೈಗಳು, ಬೆನ್ನು ಮತ್ತು ಹೊಟ್ಟೆಯ ಭಾಗ ರಕ್ತಸಿಕ್ತ ಗಾಯಗಳಾಗಿವೆ.” ಎಂದು ಪ್ರಿಯಾ ಹೇಳಿಕೊಂಡಿದ್ದಾರೆ.

    ನಾಲ್ಕೂವರೆ ವರ್ಷಗಳಿಂದ ಅಶ್ವಜಿತ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ಘಟನೆ ಥಾಣೆಯ ಕಾಸರವಾಡವಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲು ಪ್ರಯತ್ನಿಸಿದರೂ, ಪೊಲೀಸರು ಮೇಲಧಿಕಾರಿಗಳ ಒತ್ತಡದಿಂದಾಗಿ ನಿರಾಕರಿಸಿದರು.ಆದರೆ ಆಕೆ ಸಾಮಾಜಿಕ ಮಾಧ್ಯಮದಲ್ಲಿ ತನಗಾದ ಅನ್ಯಾಯ ಹೇಳಿಕಂಡ ನಂತರ ಪೊಲೀಸ್ ಠಾಣೆಯಲ್ಲಿ ಅಶ್ವಜಿತ್ ಗಾಯಕ್‌ವಾಡ್ ಮತ್ತು ಚಾಲಕನ ವಿರುದ್ಧ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯವನ್ನುಂಟುಮಾಡುವುದು), 279 (ಅದುರಿತ ಚಾಲನೆ), 504 (ಉದ್ದೇಶಪೂರ್ವಕವಾಗಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಶಾಂತಿ ಭಂಗವನ್ನು ಪ್ರಚೋದಿಸುವುದು , ಅವಮಾನ ಮಾಡುವುದು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಸದ್ಯ ಪ್ರಿಯಾ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್‌ಐಆರ್ ದಾಖಲಿಸದಂತೆ ಅಶ್ವಜಿತ್‌ನ ಸ್ನೇಹಿತರು ಆಕೆಗೆ ಮತ್ತು ಅಕೆಯ ಸಹೋದರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾ ಆರೋಪಿಸಿದ್ದಾರೆ.

    ತನ್ನ ಹೇಳಿಕೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಿಯಾ ಮಾಡಿರುವ ಆರೋಪಗಳನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    ಬೆಂಗಳೂರಿಗೆ ಎಂಟ್ರಿ ಕೊಟ್ಟ ಜಿಂಕೆ ರಸ್ತೆ ಅಪಘಾತಕ್ಕೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts