More

    ನಿಮ್ಮವರನ್ನು ಕರೆಯಿಸಿಕೊಳ್ಳಿ, ವಲಸೆ ಕಾರ್ಮಿಕರ ರಾಜ್ಯಗಳಿಗೆ ಮೊರೆಯಿಟ್ಟ ಮಹಾರಾಷ್ಟ್ರ ಸಿಎಂ

    ಮುಂಬೈ: ಕೇಂದ್ರದ ವಿಶೇಷ ವಿಶೇಷ ಅನುಮತಿ ಮೇರೆಗೆ ನಾಂದೇಢ್​ನ ಸಿಖ್ಖರ ಪವಿತ್ರ ಸ್ಥಳ ತಖ್ತ್​ ಶ್ರೀ ಹಜೂರ್​ ಸಾಹೀಬ್​ನಲ್ಲಿ ಸಿಲುಕಿದ್ದ 3,800 ಸಿಖ್ಖರನ್ನು ಪಂಜಾಬ್​ ಸರ್ಕಾರ ಮರಳಿ ರಾಜ್ಯಕ್ಕೆ ಕರೆಯಿಸಿಕೊಂಡ ಬೆನ್ನಲ್ಲೇ, ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಕ್ಕೆ ಕರೆಯಿಸಿಕೊಳ್ಳುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮನವಿ ಮಾಡಿದ್ದಾರೆ.

    ಪ್ರಸ್ತುತ ಮಹಾರಾಷ್ಟ್ರದ ವಿವಿಧೆಡೆ ಸ್ಥಾಪಿಸಲಾಗಿರುವ ನಿರಾಶ್ರಿತ ಕೇಂದ್ರಗಳಲ್ಲಿ 3.5 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರಿದ್ದಾರೆ. ಅದರಲ್ಲೂ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್​ ಹಾಗೂ ಚತ್ತೀಸ್​ಗಡ್​ದವರು ಹೆಚ್ಚಿದ್ದಾರೆ. ಇವರನ್ನು ತಮ್ಮ ರಾಜ್ಯಗಳಿಗೆ ಕರೆಸಿಕೊಳ್ಳಬೇಕೆಂದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಿಎಂ ಉದ್ಧವ್​ ಠಾಕ್ರೆ ಮನವಿ ಮಾಡಿದ್ದಾರೆ.
    ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳ ಗಡಿಗೆ ಕೊಂಡೊಯ್ದು ತಲುಪಿಸುವ ಚಿಂತನೆ ರಾಜ್ಯ ಸರ್ಕಾರದ್ದಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅಜಯ್​ ಮೆಹ್ತಾ ಹೇಳಿದ್ದಾರೆ.

    ಹಿಮಾಚಲಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ಕಾಶ್ಮೀರಿ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿವೆ. ಜತೆಗೆ, ಉತ್ತರಪ್ರದೇಶದವರನ್ನು ಕೂಡ ವಿಶೇಷ ಬಸ್​ಗಳಲ್ಲಿ ರವಾನಿಸಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರೆಯಿಸಿಕೊಳ್ಳಲು ಆಯಾ ರಾಜ್ಯಗಳು ಮುಂದಾಗಲಿ ಎಂದು ಮೆಹ್ತಾ ಹೇಳಿದ್ದಾರೆ.

    ಈ ವಿಷಯವನ್ನು ಕೇಂದ್ರ ಸಂಪುಟ ಕಾರ್ಯದರ್ಶಿಯೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವಲಸೆ ಕಾರ್ಮಿಕರನ್ನು ಆಯಾ ರಾಜ್ಯದ ಗಡಿಗೆ ರವಾನಿಸಲಾಗುವುದು. ಅವರು ನಮ್ಮವರನ್ನು ಗಡಿಗೆ ತಂದು ಬಿಡಲಿ ಎಂಬ ಸಲಹೆಯನ್ನು ಮೆಹ್ತಾ ಮುಂದಿಟ್ಟಿದ್ದಾರೆ

    ಸದ್ಯ ನಾಂದೇಢ್​ನಲ್ಲಿರುವ ಸಿಖ್ಖರನ್ನು ಒಂದು ಬಸ್​ನಲ್ಲಿ 35 ಜನರಂತೆ 80 ಬಸ್​ಗಳಲ್ಲಿ ಕಳುಹಿಸಲಾಗುತ್ತಿದೆ. ಉಳಿದವರನ್ನು ಕಳುಹಿಸಲು ಇನ್ನೂ 100 ಬಸ್​ಗಳು ಬೇಕಾಗುತ್ತವೆ. ಅಲ್ಲದೇ, 3,300 ಕಿ.ಮೀ ಪ್ರಯಾಣಕ್ಕಾಗಿ ಒಂದು ಬಸ್​ನಲ್ಲಿ ಮೂವರು ಚಾಲಕರು, ಒಬ್ಬ ಪೊಲೀಸ್​ನನ್ನು ನಿಯೋಜಿಸಲಾಗಿದೆ.

    ತನ್ನೂರಿಗೆ ತೆರಳಲು ಆತನಿಗೆ ಇದನ್ನು ಬಿಟ್ಟರೆ ಬೇರಾವ ದಾರಿಯೂ ಇರಲಿಲ್ಲ, ಇದಕ್ಕಾಗಿ ವೆಚ್ಚವಾಗಿದ್ದೆಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts