More

    ಜಂಗಮತ್ವ ಧಾರೆ ಎರೆಯುತ್ತಿರುವ ಮಹಾಂತಶ್ರೀಗಳು, ದೇಸಾಯಿಮಠದಲ್ಲಿ ಶಿವಾನುಭವ ಕಾರ್ಯಕ್ರಮ

    ಬಂಕಾಪುರ: ಶ್ರೀ ಮಹಾಂತಸ್ವಾಮಿಗಳು ಭಕ್ತ ಸಮೂಹವನ್ನು ಲೌಕಿಕದಿಂದ ಅಧ್ಯಾತ್ಮದೆಡೆಗೆ ಕರೆದೊಯ್ಯಲು ಪ್ರತಿ ತಿಂಗಳು ಶಿವಾನುಭವ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಜಂಗಮತ್ವವನ್ನು ಸಮಾಜಕ್ಕಾಗಿ ಧಾರೆ ಎರೆಯುತ್ತಿದ್ದಾರೆ ಎಂದು ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

    ಪಟ್ಟಣದ ದೇಸಾಯಿಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ 198ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮನುಷ್ಯನ ಅಂತರಂಗದಲ್ಲಿ ಅಡಗಿರುವ ಮಲೀನವನ್ನು ಅಣ್ಣ ಬಸವಣ್ಣನವರ ಸಪ್ತ ಸೂತ್ರಗಳನ್ನು ಶಿವಾನುಭವ ಕಾರ್ಯಕ್ರಮದ ಮೂಲಕ ಭೋದಿಸುವ ಮೂಲಕ ಶುದ್ಧೀಕರಿಸುವ ಕಾರ್ಯವನ್ನು ಶ್ರೀ ಮಹಾಂತಸ್ವಾಮಿಗಳು ಮಾಡುತ್ತಿದ್ದಾರೆ ಎಂದರು.

    ಸವಣೂರ ಅಡವಿಸ್ವಾಮಿಮಠದ ಶ್ರೀ ಕುಮಾರ ಸ್ವಾಮಿಗಳು ಮಾತನಾಡಿ, ಮನುಷ್ಯ ಶುದ್ಧ ಕಾಯಕದೊಂದಿಗೆ ಇಷ್ಠಲಿಂಗವನ್ನು ಶುದ್ಧ ಮನಸ್ಸಿನಿಂದ ಪೂಜಿಸಿದಾಗ ಇಷ್ಟಾರ್ಥಗಳು ಸಿದ್ಧಿಸಲಿವೆ. ಮನುಷ್ಯ ಲೌಕಿಕತೆಗೆ ಮಾರು ಹೋಗಿ ಅಧ್ಯಾತ್ಮದಿಂದ ದೂರ ಉಳಿಯುತ್ತಿರುವುದು ಖೇದಕರ ಸಂಗತಿ. ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗವನ್ನು ಪೂಜಿಸುವ ಮೂಲಕ ಮನುಷ್ಯ ತನು, ಮನ, ಭಾವವನು ಸಂತೈಸಿಕೊಳ್ಳಬೇಕು. ವೀರಶೈವ, ಲಿಂಗಾಯತರಿಗೆ ಇಷ್ಟಲಿಂಗ ಕಾಮಧೇನು ಕಲ್ಪವೃಕ್ಷವಾಗಿದ್ದು, ಅಂಗದ ಮೇಲೆ ಲಿಂಗ ಧರಿಸಿದಾತ ಸದ್ಗುಣ ಸಂಪನ್ನನಾಗಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವನು ಎಂದರು.

    ಡಾ.ಆರ್.ಎಸ್. ಅರಳೆಲೆಮಠ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ, ಪತ್ರಕರ್ತ ಆನಂದ ಮತ್ತಿಗಟ್ಟಿ, ಡಾ.ಪ್ರವೀಣಕುಮಾರ ಮಾತನಾಡಿದರು.

    ಶತಾಯುಷಿ, ಅನ್ನದಾಸೋಹಿ ನೀಲಪ್ಪ ಗಡೆದಲಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಆನಂದ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.

    ಸದಾಶಿವಪೇಟೆ ವಿರಕ್ತಮಠದ ಗದಿಗೇಶ್ವರ ಸ್ವಾಮೀಜಿ, ಬಸವಂತರಾವ್ ದೇಸಾಯಿ, ಕವಿತಾ ಬಡಶೆಟ್ಟಿ, ಜಿ.ಕೆ. ಶೆಟ್ಟರ, ಬಿ.ಎಸ್. ಗಿಡ್ಡಣ್ಣವರ, ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಈರಣ್ಣ ಕೂಲಿ, ರಾಜಶೇಖರ ಕೊಲ್ಲಾವರ, ಕುಮಾರಸ್ವಾಮಿ ಅಡವಿಸ್ವಾಮಿಮಠ, ಲಲಾಟೇಶ್ವರಸ್ವಾಮಿ ದೇಸಾಯಿಮಠ, ನಿಂಗನಗೌಡ್ರ ಪಾಟೀಲ, ದೇವಣ್ಣ ಹಳವಳ್ಳಿ, ಬಸವರಾಜ ಮಲ್ಲೂರ, ಸದಾ ಕೋರಿ, ಎಂ.ಬಿ. ಉಂಕಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts