More

  ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ 12ರಂದು

  ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್4) ಪಂಚಮಸಾಲಿ ರಾಜ್ಯ ಘಟಕದ ವತಿಯಿಂದ 2ಎ ಮೀಸಲಾತಿಗೆ ಆಗ್ರಹಿಸಿ ಜ. 12ರಂದು ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಏರ್ಪಡಿಸಲಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಸಿ.ಆರ್. ಬಳ್ಳಾರಿ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸುವರು. ಶಾಸಕ ಬಸನಗೌಡ ಯತ್ನಾಳ, ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಇತರರು ಪಾಲ್ಗೊಳ್ಳುವರು. 10 ಸಾವಿರಕ್ಕೂ ಹೆಚ್ಚು ಸಮಾಜದ ಜನ ಸೇರಲಿದ್ದಾರೆ ಎಂದರು.

  2ಎ ಮೀಸಲಾತಿ ನೀಡುವಂತೆ ಸಮಾಜ ಬಾಂಧವರು ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸರ್ಕಾರಗಳು ಸಮಾಜವನ್ನು ಕಡೆಗಣಿಸುತ್ತ ಬಂದಿವೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

  ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ. 3ರಂದು ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಉಕ್ಕುಂದ, ಬೆಳಕೇರಿ, ಚಿಕ್ಕಣಜಿ ಹಾಗೂ ಕಲ್ಲೇದೇವರು ಮತ್ತು ಜ. 4ರಂದು ಮೋಟೆಬೆನ್ನೂರ, ಮಲ್ಲೂರು, ಗುಂಡೇನಹಳ್ಳಿ, ಕೆಂಗೊಂಡ, ಕಾಕೋಳ, ಕಜ್ಜರಿ, ಹೊನ್ನತ್ತಿ ಗ್ರಾಮ ಘಟಕಗಳ ನೇತೃತ್ವದಲ್ಲಿ ಸಮಾಜ ಬಾಂಧವರ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಯಲ್ಲಿ ಸಮಿತಿ ರಚನೆ ಹಾಗೂ ಇತ್ಯಾದಿ ಚರ್ಚೆ ನಡೆಯಲಿದೆ ಎಂದರು.

  ಎಸ್.ಬಿ. ಲಕ್ಕಣ್ಣವರ, ಮುರಡೆಪ್ಪ ಹೆಡಿಯಾಲ, ಶಂಭಣ್ಣ ಮಲಗಾರ ಇತರರಿದ್ದರು.

  See also  ಸರ್ಕಾರಿ ಶಾಲೆ ಮಕ್ಕಳಿಗೆ ಜೈ ಶ್ರೀರಾಮ್ ಚಿಹ್ನೆ ಮುದ್ರಿತ ಇರುವ ಕವರ್‌ನಲ್ಲಿ ಲಾಡು ವಿತರಣೆ: ಡಿಡಿಪಿಐಗೆ ದೂರು ಕೊಟ್ಟ ಪಾಲಕರು, ಎಸ್‌ಡಿಎಂಸಿ ಸದಸ್ಯರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts