More

    ಗುಣಮಟ್ಟದ ಕಬ್ಬು ಪೂರೈಸಿ

    ಮಹಾಲಿಂಗಪುರ: ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಹೋಮ ಹವನ ಹಾಗೂ ಕಬ್ಬು ತಂದ ಎತ್ತಿನ ಗಾಡಿಗಳು, ಟ್ರಾೃಕ್ಟರ್ ಮತ್ತು ಕಬ್ಬು ಹೊತ್ತೊಯುವ, ನುರಿಸುವ ಯಂತ್ರಗಳಿಗೆ ಮಂಗಳವಾರ ಪೂಜೆ ಸಲ್ಲಿಸಿ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಯಿತು.

    ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಬಕ್ಷಿ ಮಾತನಾಡಿ, ರೈತರು ಪ್ರತಿ ವರ್ಷದಂತೆ ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬನ್ನು ಪೂರೈಸಿ ಈ ಹಂಗಾಮು ಯಶಸ್ವಿಯಾಗಲು ಸಹಕರಿಸಬೇಕೆಂದರು.

    ಮುಧೋಳ ಸಿಪಿಐ ಎಚ್.ಆರ್. ಪಾಟೀಲ ಮಾತನಾಡಿ, ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರಾೃಕ್ಟರ್‌ಗಳಿಗೆ ನಂಬರ್ ಪ್ಲೇಟ್, ಇನ್ಶೂರೆನ್ಸ್, ಹಿಂಭಾಗ-ಮುಂಭಾಗ ಕೆಂಪು ಬಣ್ಣದ ರೇಡಿಯಂ, ಎರಡೂ ಬದಿಗೆ ಹಳದಿ ಬಣ್ಣದ ರೇಡಿಯಂ ಇರಬೇಕು. ಚಾಲಕ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಚಾಲಕರು ಜೋರಾಗಿ ಟೇಪ್ ರಿಕಾರ್ಡರ್ ಹಚ್ಚಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ನಿಯಮ ಉಲ್ಲಂಘಿಸಿದರೆ ವಾಹನವನ್ನು ಜಪ್ತಿ ಮಾಡಲಾಗುವುದು. ನಾನು ಕೂಡ ಸದರಿ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದು, ನನಗೂ ಈ ನಿಯಮ ಅನ್ವಯಿಸುತ್ತದೆ. ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ಯಾರ ವಶೀಲಿ ತಂದರೂ ಜಪ್ತಿ ಮಾಡಿದ ವಾಹನ ಬಿಡುವುದಿಲ್ಲ ಎಂದು ಎಚ್ಚರಿಸಿದರು.

    ಮಹಾಲಿಂಗಪುರ ಠಾಣಾಧಿಕಾರಿ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ, ಕೇವಲ ಪೊಲೀಸರು, ಸಾರಿಗೆ ಅಧಿಕಾರಿಗಳಿಂದ ಅಪಘಾತ ತಪ್ಪಸಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಖಾನೆ ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಹುಕ್ಕೇರಿ, ಸಹಾಯಕ ನಿರ್ದೇಶಕ ಆರ್.ವಿ. ಕುಲಕರ್ಣಿ, ಅಧಿಕಾರಿಗಳಾದ ಅತುಲ ಅಗರವಾಲ್, ಎಸ್.ಎಲ್. ಪಲ್ಲೇದ, ಆರ್.ಐ. ಬಾಗೋಜಿ, ಪಿ.ಸಿ. ಬಾಗೇವಾಡಿ, ಎಂ.ವಿ. ಕಡಿವಾಲ, ರಾಮಚಂದ್ರ ಸೋನವಾಲಕರ, ರಬಕವಿ-ಬನಹಟ್ಟಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ, ರೈತ ಮುಖಂಡರಾದ ಬಿ.ಜಿ. ಹೊಸೂರ, ಬಸವಂತ ಕಾಟೆ, ರಾಮಕೃಷ್ಣ ಬುದ್ನಿ, ಲಕ್ಷ್ಮಣ ಹುಚರಡ್ಡಿ, ಮಹಾಲಿಂಗಪ್ಪ ಸನದಿ, ಬಸವರಾಜ ಪೂಜಾರ, ಚನ್ನಪ್ಪ ಕೊಳಿಗುಡ್ಡ, ಮಲ್ಲಪ್ಪ ಸಿಂಗಾಡಿ, ಮಹಾದೇವ ಮಾರಾಪುರ, ಮಹಾಲಿಂಗಪ್ಪ ಇಟ್ನಾಳ ಮುಂತಾದವರು ಇದ್ದರು. ಸೈದಾಪುರ, ಸಮೀರವಾಡಿ ಹಾಗೂ ಅನೇಕ ಸ್ಥಳಗಳಿಂದ ಆಗಮಿಸಿದ ಕಬ್ಬು ಬೆಳೆಗಾರರು, ಕಾರ್ಖಾನೆ ಸಿಬ್ಬಂದಿ, ಕಾರ್ಮಿಕರು ಆಗಮಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts