More

    ಕರೊನಾ ತಡೆಗಟ್ಟಲು ತಾಲೂಕಾಡಳಿತ ಶ್ರಮ

    ಮಹಾಲಿಂಗಪುರ: ಪಟ್ಟಣ ಸಮೀಪದ ಬುದ್ನಿ ಪಿಡಿಯಲ್ಲಿ ತಾತ್ಕಾಲಿಕವಾಗಿ ಶಾಮಿಯಾನ ಟೆಂಟ್‌ನಲ್ಲಿ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗೆ ನೂತನವಾಗಿ ನಿರ್ಮಿಸಿರುವ ಶೆಡ್ ಅನ್ನು ತೇರದಾಳ ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು, ಮಹಾಲಿಂಗಪುರದ ಚೆಕ್‌ಪೋಸ್ಟ್ ಮಹಾರಾಷ್ಟ್ರ, ಗೋವಾ ರಾಜ್ಯ ಮತ್ತು ಪಕ್ಕದ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆಯ ಮುಖ್ಯ ಚೆಕ್‌ಪೋಸ್ಟ್ ಆಗಿದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇದುವರೆಗೆ ಒಂದೇ ಕರೊನಾ ಸೋಂಕು ಪತ್ತೆಯಾಗಿದೆ. ಸದ್ಯ ತಾಲೂಕು ಆಡಳಿತ ಕರೊನಾ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು.

    ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ತಾಲೂಕಿನಲ್ಲಿ 227 ಸಾಂಸ್ಥಿಕ ಕ್ವಾರಂಟೈನ್ ವ್ಯಕ್ತಿಗಳಲ್ಲಿ 53 ಜನರು ಬಿಡುಗಡೆಯಾಗಿ, 173 ಜನರು ಉಳಿದಿದ್ದಾರೆ. ಹೋಮ್ ಕ್ವಾರಂಟೈನ್‌ದಲ್ಲಿದ್ದ 171 ಜನರಲ್ಲಿ 104 ಜನರು ಬಿಡುಗಡೆಯಾಗಿ 67 ಜನರು ಉಳಿದಿದ್ದಾರೆ ಎಂದರು.

    ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಬಿಜೆಪಿ ತೇರದಾಳ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಮುಖಂಡರಾದ ಬಸನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಮಹಾಲಿಂಗ ಕುಳ್ಳೋಳ್ಳಿ, ರಾಜು ಅಂಬಲಿ, ಜಿ.ಎಸ್.ಗೊಂಬಿ, ಶಿವಲಿಂಗ ಘಂಟಿ, ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ, ಜಮೀರ್ ಯಕ್ಸಂಬಿ, ಬಾಳಪ್ಪ ಜಗದಾಳ, ಬಸವರಾಜ ಚಮಕೇರಿ, ಅರ್ಜುನ ಮೋಪಗಾರ, ವಿಷ್ಣುಗೌಡ ಪಾಟೀಲ, ಪುರಸಭೆ ಸದಸ್ಯರು ಸೇರಿ ಹಲವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts