More

    ಮಹಾಲಕ್ಷ್ಮೀ ದೇವಿ ಜಾತ್ರೆ

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಮಾ.11ರಿಂದ 16ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಮಹೇಶ ಭಾತೆ ತಿಳಿಸಿದ್ದಾರೆ.

    ಸೋಮವಾರ ಕರೋಶಿ ಗ್ರಾಪಂ ಸಭಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 48 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮದೇವಿಯರಾದ ಲಕ್ಷ್ಮೀದೇವಿ, ಗಂಗಾಮಾತಾ, ರೇಣುಕಾದೇವಿ ಜಾತ್ರೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಮಾ.11ರಂದು ಬೆ.6ಗಂಟೆಗೆ ಕುಂಬಾರ ಲಕ್ಷ್ಮೀದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು ಚಿಕ್ಕೋಡಿ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ನೆರವೇರಿಸಲಿದ್ದಾರೆ. ಕುಂಭಮೇಳ, ಮಹಾಪ್ರಸಾದ, ರಾತ್ರಿ ಕೊಲ್ಲಾಪುರ ಆಕಾಶ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

    12 ರಂದು ತಳದ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಚಂಡಿ ಹವನ, 13ರಂದು ಲಕ್ಷ್ಮೀ ದೇವಿಗೆ ಉಡಿ ತುಂಬುವುದು, ನಂತರ ನೈವೇದ್ಯ, ರಾತ್ರಿ ಮೂರ್ತಿಗಳ ಮೆರವಣಿಗೆ ಜರುಗಲಿದೆ. 14ರಂದು ಧಾರ್ಮಿಕ ಕಾರ್ಯಕ್ರಮ, 15 ರಂದು ಜೋಡು ಕುದುರೆ ಶರ್ಯತ್ತು, ಮಹಿಳೆಯರ ಓಡುವ ಶರ್ಯತ್ತು ಹಾಗೂ ರಾತ್ರಿ 10ಗಂಟೆಗೆ ರಸಮಂಜರಿ ಕಾರ್ಯಕ್ರಮ, 16 ರಂದು ಮಧ್ಯಾಹ್ನ 3 ಗಂಟೆಗೆ ದೇವಿ ಮೆರವಣಿಗೆ ಜರುಗಲಿದೆ ಎಂದು ಅವರು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜಯ ಕಾಂಬಳೆ, ವಿಜಯಕುಮಾರ ಕೋಠಿವಾಲೆ, ದುಂಡಯ್ಯ ಪೂಜಾರಿ, ಕಾಶಿನಾಥ ಭಾಮನೆ, ಗುರು ನಿರ್ವಾಣಿ, ಅಣ್ಣಪ್ಪ ಶೆಂಡೂರೆ, ಸುರೇಶ ಕೇಸ್ತಿ, ಬಾಳು ಮುಗಳಿ ಇದ್ದರು.

    13ಕ್ಕೆ ಲಿಂ.ಗುರುಬಸವ ಸ್ವಾಮೀಜಿ ಸ್ಮರಣೋತ್ಸವ

    ಅಥಣಿಯ ಮೋಟಗಿಮಠದ ಸಾಹಿತ್ಯ ತಪಸ್ವಿ, ಲಿಂ.ಗುರುಬಸವ ಸ್ವಾಮೀಜಿ 35ನೇ ಸ್ಮರಣೋತ್ಸವ ಮಾ.13ರಂದು ಪಟ್ಟಣದ ಮೋಟಗಿ ಮಠದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಪ್ರಭುಚನ್ನಬಸವ ಸ್ವಾಮೀಜಿ ವಹಿಸುವರು. ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಬಸವ ಬೆಳವಿಯ ಶರಣಬಸವ ದೇವರು ಚಿಂತನಗೋಷ್ಠಿ ನಡೆಸುವರು. ಅಪ್ಪಾಸಾಬ್ ನಾಮದ, ಸಂಜಯ ತೆಲಸಂಗ, ಮನೋಹರ ಅಂಜನಿ, ರಸೂಲ್‌ಸಾಬ ನದಾಫ್, ಮಲ್ಲಿಕಾರ್ಜುನ ಬಿರಾದಾರ, ಗಂಗಪ್ಪ ಕೊಂಕಣಿ, ಮಲ್ಲಿಕಾರ್ಜುನ ಅಂದಾನಿ, ಶ್ರೀಶೈಲ ಬ್ಯಾಳಗೌಡರ, ಸಲೀಮ ನದಾಫ್, ಗಿರಮಲ್ಲ ಬಗಲಿ ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

    ಅರಿಶಿಣ ಪುಡಿ ಬಿಟ್ಟು ಕೆಮಿಕಲ್ ಮಿಶ್ರಿತ ಬಣ್ಣಗಳ ಬಳಕೆ ಮಾಡದಂತೆ ಈಗಾಗಲೇ ಗ್ರಾಪಂನಿಂದ ತಿಳಿವಳಿಕೆ ಮೂಡಿಸಲಾಗಿದೆ. ನಿಯಮ ಮೀರಿದರೆ ಸ್ಥಳೀಯ ಆಡಳಿತದಿಂದ ಕ್ರಮ ಕೈಗೊಳ್ಳಲಾಗುವುದು.
    | ಮಹೇಶ ಭಾತೆ ಜಿಪಂ ಮಾಜಿ ಸದಸ್ಯ, ಜಾತ್ರಾ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts