More

    ಕ್ಯಾತನಹಳ್ಳಿ ಡೇರಿಗೆ ಮಹದೇವು ಅಧ್ಯಕ್ಷ

    ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರೈತಸಂಘ ಬೆಂಬಲಿತ ಅಭ್ಯರ್ಥಿ ಮಹದೇವು ಹಾಗೂ ಉಪಾಧ್ಯಕ್ಷರಾಗಿ ಎಲ್.ಮೋಹನ್‌ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

    ಒಟ್ಟು 12 ಸದಸ್ಯ ಬಲದ ಸಂಘದ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ರೈತಸಂಘ ಬೆಂಬಲಿತ ಅಭ್ಯರ್ಥಿಗಳನ್ನು ಹೊರತು ಪಡಿಸಿ ಬೇರ‌್ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸದ ಪರಿಣಾಮ ಎಲ್ಲ 12 ಸ್ಥಾನಗಳಲ್ಲೂ ರೈತಸಂಘ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷಗಾದಿ ಬಯಸಿ ಮಹದೇವು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಮೋಹನ್‌ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿರಲಿಲ್ಲ, ಹೀಗಾಗಿ ಚುಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಿರ್ಮಲಾ ಅಭ್ಯರ್ಥಿಗಳ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

    ರೈತಸಂಘದ ಹಿರಿಯ ಮುಖಂಡ ಕೆ.ಕೆ.ಗೌಡೇಗೌಡ ಮಾತನಾಡಿ, ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಇತಿಹಾಸದಲ್ಲಿ ನಿರ್ದೇಶಕರ ಸ್ಥಾನಕ್ಕೆ ಎಂದೂ ಅವಿರೋಧ ಆಯ್ಕೆ ನಡೆದಿರಲಿಲ್ಲ. ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯದೆ ಎಲ್ಲ 12 ಸ್ಥಾನಗಳು ರೈತಸಂಘ ಬೆಂಬಲಿತರ ಪಾಲಾಗಿರುವುದು ಇತಿಹಾಸವಾಗಿದೆ. ಈ ಗೆಲುವು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸುನೀತಾ ಪುಟ್ಟಣ್ಣಯ್ಯ ಅವರಿಗೆ ಸಲ್ಲುತ್ತದೆ ಎಂದರು.

    ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ನೂತನವಾಗಿ ಆಯ್ಕೆಯಾದ ರೈತಸಂಘ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಶುಭಾಶಯ ಕೋರಿದರು. ರೈತಸಂಘ ಮುಖಂಡರಾದ ಕೆ.ಕೆ.ಗೌಡೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್. ಮಹದೇವು, ಲೋಕೇಶ್(ಪಿಎ), ಸಂಘದ ನಿರ್ದೇಶಕರಾದ ಕೆ.ಎನ್.ಗಿರೀಶ್, ಆನಂದಮೂರ್ತಿ, ಕೆ.ಜಿ.ಚೇತನ್, ಕೆ.ವಿನೋದ್, ಕೆ.ಎಸ್.ಬಾಬು, ಸೋಮಶೇಖರ್, ಕೆ.ಎಸ್.ರವಿ, ದೇವರಾಜು, ಲಕ್ಷಮ್ಮ, ಆಶಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts