More

    ಕರೊನಾದಿಂದ ಬಲಿಯಾದಳು ಮಗಳು ಜಾನಕಿ : ಧಾರಾವಾಹಿ ಅಪೂರ್ಣ ವಾಗಿಯೇ ಮುಗಿಯಲಿದೆ

    ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಜನಪ್ರಿಯ ಧಾರಾವಾಹಿ ‘ಮಗಳು ಜಾನಕಿ’ ಮುಂದಿನ ವಾರ ಕೊನೆಯಾಗಲಿದೆ. ಈಗಾಗಲೇ ಅವರಿಗೆ ಹೊಸ ಕಂತುಗಳ ಚಿತ್ರೀಕರಣ ಮಾಡದಿರುವಂತೆ ಚಾನಲ್ ಸೂಚಿಸಿರುವುದರಿಂದ, ಸದ್ಯಕ್ಕೆ ಚಿತ್ರೀಕರಣವಾಗಿರುವ ಕಂತುಗಳು ಮಾತ್ರ ಪ್ರಸಾರವಾಗಲಿದೆ.

    ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಟಿ.ಎನ್. ಸೀತಾರಾಂ, ‘ಕಲರ್ಸ್ ಸೂಪರ್ ವಾಹಿನಿಯನ್ನು ನಿಲ್ಲಿಸುತ್ತಿರುವ ವಿಚಾರ ಗೊತ್ತಿರಬಹುದು. ಹಾಗಾಗಿ ನಮ್ಮ ಧಾರಾವಾಹಿಯ ಪ್ರಸಾರವೂ ನಿಲ್ಲುತ್ತಿದೆ. ಲಾಕ್​ಡೌನ್​ಗೂ ಮುನ್ನ 10 ಕಂತುಗಳ ಚಿತ್ರೀಕರಣ ಮಾಡಿದ್ದೆ. ಅದರ ಪ್ರಸಾರ ಈಗಾಗಲೇ ಶುರುವಾಗಿದ್ದು, ಮುಂದಿನ ವಾರ ಮುಕ್ತಾಯವಾಗಲಿದೆ. ಆ ನಂತರ ಧಾರಾವಾಹಿ ಪ್ರಸಾರವಾಗುವುದಿಲ್ಲ’ ಎನ್ನುತ್ತಾರೆ ಸೀತಾರಾಂ. ಹಾಗಾದರೆ, ‘ಮಗಳು ಜಾನಕಿ’ ಧಾರಾವಾಹಿಯನ್ನು ಪೂರ್ಣ ಮಾಡುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ, ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ಧಾರಾವಾಹಿಯನ್ನು ಪೂರ್ಣ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಅವಕಾಶ ಕೊಟ್ಟರೆ ನಾಲ್ಕೂ ಧಾರಾವಾಹಿಗಳಿಗೆ ಅವಕಾಶ ಕೊಡಬೇಕು. ಒಬ್ಬರಿಗೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಈಗಿರುವಷ್ಟನ್ನು ಮುಂದಿನ ಶುಕ್ರವಾರದವರೆಗೂ ಪ್ರಸಾರ ಮಾಡಲಾಗುತ್ತದೆ’ ಎನ್ನುತ್ತಾರೆ ಅವರು.

    ‘ಮಗಳು ಜಾನಕಿ’ ನಂತರ ಮುಂದೇನು? ಈ ಬಗ್ಗೆ ಟಿ.ಎನ್. ಸೀತಾರಾಂ ಅವರಿಗೂ ಸದ್ಯಕ್ಕೆ ಗೊತ್ತಿಲ್ಲವಂತೆ. ‘ಇದರಲ್ಲಿ ಯಾರದ್ದೂ ತಪ್ಪಿಲ್ಲ. ಕರೊನಾದಿಂದ ಬಲಿಯಾದಳು ‘ಮಗಳು ಜಾನಕಿ’. ಇದೊಂದು ಜಾಗತಿಕ ಸಮಸ್ಯೆ. ಯಾರನ್ನೂ ದೂಷಿಸುವುದಕ್ಕೆ ಆಗಲ್ಲ’ ಎನ್ನುತ್ತಾರೆ.

    ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…

    ಚಾನಲ್ ನಿಲ್ಲಲ್ಲ; ಧಾರಾವಾಹಿ ನಿಂತಿದೆ: ಇನ್ನು ಕಲರ್ಸ್ ಸೂಪರ್ ಚಾನಲ್ ನಿಂತಿದೆ ಎಂಬ ವಿಷಯ ಅಲ್ಲಗಳೆಯುತ್ತಾರೆ, ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರಿನ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್. ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಕಲರ್ಸ್ ಸೂಪರ್ ಚಾನಲ್ ನಿಂತಿಲ್ಲ. ಹೊಸ ಕಾರ್ಯಕ್ರಮಗಳು ಮಾತ್ರ ಪ್ರಸಾರವಾಗುತ್ತಿಲ್ಲ ಅಷ್ಟೇ. ನಾಲ್ಕೂ ಧಾರಾವಾಹಿ ನಿಲ್ಲಿಸಿದ್ದೇವೆ. ಸದ್ಯಕ್ಕೆ ಹಳೆಯ ಕಾರ್ಯಕ್ರಮಗಳೇ ರಿಪೀಟ್ ಆಗುತ್ತಿದ್ದು, ಸೆಪ್ಟೆಂಬರ್​ನಿಂದ ಹೊಸ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಆಗ ಈ ಧಾರಾವಾಹಿಗಳನ್ನು ಮತ್ತೆ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಹಾಗಾಗಿ ನಾಲ್ಕು ಧಾರಾವಾಹಿಗಳನ್ನು ನಿಲ್ಲಿಸುತ್ತಿದ್ದೇವೆ. ಸೆಪ್ಟೆಂಬರ್​ನಿಂದ ಹೊಸ ರೂಪದಲ್ಲಿ ಕಲರ್ಸ್ ಸೂಪರ್ ಪ್ರಸಾರ ಪ್ರಾರಂಭವಾಗಲಿದೆ’ ಎಂದು ಹೇಳುತ್ತಾರೆ.

    ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts