More

    ಕುಡಿತದ ಚಟದಿಂದ ಕುಟುಂಬದ ಸಂತೋಷ ಹಾಳು

    ನಂಜನಗೂಡು: ಮದ್ಯದ ಚಟದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ನಾಶವಾಗಲಿದೆ ಎಂದು ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಅನಿತಾ ಹೇಳಿದರು.

    ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ನಿಂದ ಆಯೋಜಿಸಿದ್ದ 1782ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಕುಡಿತದ ಚಟ ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. ಮಕ್ಕಳನ್ನು ಅಬಲರನ್ನಾಗಿ ಮಾಡುತ್ತದೆ. ಹೆಣ್ಣು ಮಗಳನ್ನು ವಿಧವೆಯನ್ನಾಗಿ ಮಾಡುತ್ತದೆ. ಆ ಹೆಣ್ಣು ಮಗಳಿಗೆ ಬದುಕಿಗೆ ದಾರಿ ಇಲ್ಲದಾಗಲಿದೆ. ಆದ್ದರಿಂದ ಕುಡಿತಕ್ಕೆ ದಾಸರಾಗುವುದು ಬೇಡ ಎಂದು ಮನವಿ ಮಾಡಿದರು.
    ಕುಡಿತದೊಂದಿಗೆ ಧೂಮಪಾನ ಕೂಡ ಆರೋಗ್ಯಕ್ಕೆ ಹಾನಿಕರವಾಗಿದ್ದು, ಎರಡೂ ಚಟದಿಂದ ದೂರವಿರಬೇಕು. ಇಲ್ಲದಿದ್ದರೆ ಆರೋಗ್ಯದೊಂದಿಗೆ ಕೌಟುಂಬಿಕ ನೆಮ್ಮದಿ ಕೂಡ ಹಾಳಾಗಲಿದೆ ಎಂದು ಎಚ್ಚರಿಕೆ ನೀಡಿದರು. ಧೂಮಪಾನ, ಮದ್ಯಪಾನ ಇವುಗಳ ವ್ಯತಿರಿಕ್ತ ಪರಿಣಾಮದ ಬಗ್ಗೆ ಮಾಹಿತಿ ನೀಡಲಾಯಿತು. ಹುಲ್ಲಹಳ್ಳಿ ಟ್ರಸ್ಟ್ ಯೋಜನಾಧಿಕಾರಿ ಗಣೇಶ್ ನಾಯಕ್, ಸೇವಾ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts