More

    ವಿಕಾಸ ವಿದ್ಯಾಸಂಸ್ಥೆಯಲ್ಲಿ ಮಧುರ ಯಾನ

    ಶಿವಮೊಗ್ಗ: ಪೋಷಕರ ಸಹಮಿಲನವು ಶಿಕ್ಷಕರು ಹಾಗೂ ಪಾಲಕರ ನಡುವಿನ ಬಾಂಧವ್ಯ ಗಟ್ಟಿಗೊಳಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ವಿಕಾಸ ವಿದ್ಯಾ ಸಮಿತಿ ಕಾರ್ಯದರ್ಶಿ ಎ.ಜೆ.ರಾಮಚಂದ್ರ ಹೇಳಿದರು.
    ಆಲ್ಕೊಳ ವಿಕಾಸ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೋಷಕರ ಸಹಮಿಲನ ಮಧುರಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರಿಗೆ ವಿದ್ಯಾರ್ಥಿಯ ನಡವಳಿಕೆ, ಪಾಲಕರ ಹಿನ್ನೆಲೆ, ಮಗುವಿನ ಇತರ ಚಟುವಟಿಕೆ ಬಗ್ಗೆ ಅರಿವು ಇರಬೇಕು. ಇದಕ್ಕೆ ಶಿಕ್ಷಕರು, ಪಾಲಕರ ನಡುವಿನ ಪರಸ್ಪರ ಒಡನಾಟ ಅಗತ್ಯ ಎಂದರು.
    ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಶಿಕ್ಷಣ ಎಂಬುದು ವ್ಯಾಪಾರವಲ್ಲ. ಶುಲ್ಕ ನೀಡಿದಷ್ಟು ವಿದ್ಯೆ ನೀಡುವುದು ಸಾಧ್ಯವಿಲ್ಲ. ವಿದ್ಯಾರ್ಥಿ ಪಡೆದಷ್ಟೇ ವಿದ್ಯೆ ನೀಡಬಹುದಷ್ಟೇ. ಇಂತಹ ಕಾರ್ಯಕ್ರಮಗಳ ಮೂಲಕ ಪಾಲಕರ, ಶಿಕ್ಷಕರು ಪರಸ್ಪರ ಅರಿತುಕೊಳ್ಳಲು ಅನುಕೂಲವಾಗಿದೆ ಎಂದರು.
    ಎಜುರೇಟ್ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ, ವಿಕಾಸ ಪ್ರೌಢಶಾಲೆ ಮುಖ್ಯಶಿಕ್ಷಕ ಗೋಪಾಲಕೃಷ್ಣ, ವಿನೋಬನಗರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಂಜನಾ, ಆಲ್ಕೊಳ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಜ್ವಾಲಮಾಲಿನಿ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಗಾಯತ್ರಿ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts