ಎಂ.ಆರ್.ಕಾಂತರಾಜ್ ಮಿರ್ಲೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ

1 Min Read
ಎಂ.ಆರ್.ಕಾಂತರಾಜ್ ಮಿರ್ಲೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ
ಮಿರ್ಲೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಂ.ಆರ್.ಕಾಂತರಾಜ್ ಅವಿರೋಧವಾಗಿ ಆಯ್ಕೆಯಾದರು.

ಸಾಲಿಗ್ರಾಮ: ತಾಲೂಕಿನ ಮಿರ್ಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಆರ್.ಕಾಂತರಾಜ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಎಸ್ ಯೋಗೇಶ್ ಅವರ ರಾಜೀನಾಮೇಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಎಂ.ಆರ್.ಕಾಂತರಾಜ್ ಹೊತರುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಎಸ್.ರವಿ ಅವಿರೋಧ ಆಯ್ಕೆ ಘೋಷಿಸಿದರು.

ನಿರ್ದೇಶಕರಾದ ಭಾಗ್ಯಮ್ಮ, ಎಂ.ಆರ್.ವಸಂತ್ ಕುಮಾರ್, ಶಾರದಾಬಾಯಿ, ಎಂ.ಕೆ.ಮಹೇಶ್, ಎಂ.ಎಸ್.ಯೋಗೇಶ್, ರಂಗಸ್ವಾಮಿ, ಹಾಜರಿದ್ದು, ಉಳಿದವರು ಗೈರಾಗಿದ್ದರು. ಕೋರಂ ಹೆಚ್ಚಾಗಿ ಇದ್ದ ಕಾರಣ ಚುನಾವಣಾಧಿಕಾರಿ ಅಧ್ಯಕ್ಷರ ಆಯ್ಕೆ ನಡೆಯಿತು.

ಕಾಂತರಾಜ್ ಅವರನ್ನು ಜಿಲ್ಲಾ ಪತ್ರಬರಹಗಾರ ಮಿರ್ಲೆ ರಾಜೀವ್, ಬಂಡಿಹೊಳೆಮೋಹನ್, ಕುಪ್ಪೆಬಾರೆವಾಸು, ಎಂ.ಜೆ.ನಾಗೇಶ್, ಕೃಷ್ಣೇಗೌಡ, ಎಂ.ಎನ್.ರಾಜೇಶ್, ಎಂ ಆರ್ ನಾಗೇಶ್, ರಂಗಣ್ಣ, ರಾಮಸ್ಡಾಮಿಗೌಡ, ಕಾರ್ಯದರ್ಶಿ ಬಿ.ಸಿ.ವಸಂತ್‌ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು.

See also  ಸಾಲ ಭರಪೂರ, ಬೆನ್ನೇರಿದೆ ತೆರಿಗೆ ಭಾರ!: ತಲೆಕೆಳಗಾಯ್ತು ಸರ್ಕಾರದ ಗ್ಯಾರಂಟಿ ಲೆಕ್ಕಾಚಾರ
Share This Article