More

    ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ನೂತನ ಉಪನಾಯಕ

    ಬೆಂಗಳೂರು: ಐಪಿಎಲ್-17ನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್-ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ನೂತನ ಉಪನಾಯಕನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಆಲ್ರೌಂಡರ್ ಕೃನಾಲ್ ಪಾಂಡ್ಯ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಕೆಎಲ್ ರಾಹುಲ್ ನಂ.29 ಜೆರ್ಸಿಯನ್ನು ಪೂರನ್‌ಗೆ ಹಸ್ತಾಂತರಿಸುವ ಪೋಟೋವನ್ನು ್ರಾಂಚೈಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ.

    ಹಿಂದಿನ 2 ಆವೃತ್ತಿಗಳಲ್ಲಿ ಪ್ಲೇ ಆ್ಗೇರಿದರು ಪ್ರಶಸ್ತಿ ಸುತ್ತಿಗೇರುವಲ್ಲಿ ವಿಲವಾಗಿರುವ ಲಖನೌ ಈ ಬಾರಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ತಂಡಕ್ಕೆ ಆಸೀಸ್‌ನ ಜಸ್ಟೀನ್ ಲ್ಯಾಂಗರ್ ನೂತನ ಕೋಚ್ ಆಗಿ ನೇಮಕಗೊಂಡ ಬಳಿಕ ಇದು ಮೊದಲ ಬದಲಾವಣೆಯಾಗಿದೆ. 2023ರ ಆವತ್ತಿಯಲ್ಲಿ ಕಾಯಂ ನಾಯಕ ಕೆಎಲ್ ರಾಹುಲ್ ಗೈರಿನಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು.

    ಚುಟುಕು ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ 28 ವರ್ಷದ ಪೂರನ್ ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಐಪಿಎಲ್ ಜರ್ನಿ ಆರಂಭಿಸಿದರು. ಬಳಿಕ ಸನ್‌ರೈಸರ್ಸ್‌ ತಂಡದಲ್ಲೂ ಆಡಿ, ನಂತರ 2023ರ ಹರಾಜಿನಲ್ಲಿ 16 ಕೋಟಿ ರೂ.ಗಳಿಗೆ ಲಖನೌ ತಂಡ ಸೇರಿದರು. ಕಳೆದ ಆವೃತ್ತಿಯಲ್ಲಿ ಆಡಿದ 15 ಪಂದ್ಯಗಳಲ್ಲಿ 358 ರನ್ ಕಲೆಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts