More

    ಇನ್ನು ಎಲ್​ಪಿಜಿ ಸಿಲಿಂಡರ್​ಗೂ ಬರಲಿದೆ ಕ್ಯೂಆರ್​ ಕೋಡ್​!

    ನವದೆಹಲಿ: ಇತ್ತೀಚೆಗೆ ವಿದೇಶಿ ಸುದ್ದಿವಾಹಿನಿಯಲ್ಲಿ ಸಂದರ್ಶಕಿಗೆ ಖಡಕ್​ ಉತ್ತರ ಕೊಟ್ಟು ಕೇಂದ್ರ ಮಂತ್ರಿ ಹರ್​ದೀಪ್​ಸಿಂಗ್​ ಪುರಿ ದೇಶಾದ್ಯಂತ ಜನರ ಮನಸ್ಸನ್ನು ಗೆದ್ದಿದ್ದರು. ಈಗ ಅವರು ಎಲ್​ಪಿಜಿ ಸಿಲಿಂಡರ್​ ಮೇಲೆ ಕ್ಯೂಆರ್​ ಕೋಡ್​ ಅಂಟಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.

    ಕಳ್ಳತನವನ್ನು ನಿಯಂತ್ರಿಸಿ ಟ್ರ್ಯಾಕಿಂಗ್ ನಡೆಸಲು ಎಲ್​ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್​ ಕೋಡ್‌ಗಳೊಂದಿಗೆ ಬರಲಿವೆ. ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು (ಬುಧವಾರ) ಪ್ರಕಟಿಸಿದ್ದಾರೆ.

    ಮೊಬೈಲ್​ನಿಂದ ಸುಲಭವಾಗಿ ಸ್ಕ್ಯಾನ್​ ಮಾಡಬಹುದಾದ ಕ್ಯೂಆರ್​ ಕೋಡ್‌ಅನ್ನು ಸುಮಾರು 20,000 LPG ಸಿಲಿಂಡರ್‌ಗಳಿಗೆ ಮೊದಲ ಕಂತಿನಲ್ಲಿ ಎಂಬೆಡ್ ಮಾಡಲಾಗುತ್ತದೆ. ಇದರಿಂದ ಯಾವ ಸಿಲಿಂಡರ್​ ಎಲ್ಲಿದೆ ಎನ್ನುವ ಮಾಹಿತಿ ತಕ್ಷಣ ಸಿಗುತ್ತದೆ.

    ‘ಸದ್ಯಕ್ಕೆ ಕ್ಯೂಆರ್​ ಕೋಡ್ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಮುಂದೆ ಉತ್ಪಾದನೆ ಆಗಲಿರುವ ಹೊಸ ಸಿಲಿಂಡರ್‌ಗಳ ಮೇಲೆ ಕ್ಯೂಆರ್​ ಕೋಡ್​ ವೆಲ್ಡ್ ಮಾಡಲಾಗುತ್ತದೆ. ಈ ವ್ಯವಸ್ಥೆ ಸಕ್ರಿಯಗೊಂಡಾಗ ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ದಾಸ್ತಾನು ನಿರ್ವಹಣೆಯಂತಹ ಅನೇಕ ಸಮಸ್ಯೆಗಳನ್ನು ಸುಲಭಾವಾಗಿ ಪರಿಹರಿಸಬಹುದು’ ಎಂದು ಹರ್​ದೀಪ್​ ಸಿಂಗ್​ ಪುರಿ ಟ್ವೀಟ್​ ಮಾಡಿದ್ದಾರೆ.

    ವರದಿಗಳ ಪ್ರಕಾರ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳು ಕ್ಯೂಆರ್ ಕೋಡ್‌ನೊಂದಿಗೆ ನಿಮ್ಮ ಮನೆಯಂಗಳಕ್ಕೆ ಬಂದು ಇಲಿಯಲಿವೆ. ಇನ್ನು ಹಳೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ವಿಶೇಷ ಸ್ಟಿಕ್ಕರ್ ಅನ್ನು ಸೇರಿಸಲಾಗುವುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts