More

    ಭಾರಿ ಇಳಿಕೆಯಾಗಲಿದೆ ಎಲ್​ಪಿಜಿ ಬೆಲೆ; ಸಿಎನ್​ಜಿ, ಪಿಎನ್​ಜಿ ದರವೂ ಕುಸಿತ

    ನವದೆಹಲಿ: ಅಡುಗೆ ಅನಿಲ ಹಾಗೂ ಸಾಂದ್ರಿಕೃತ ನೈಸರ್ಗಿಕ ಅನಿಲ ( ಸಿಎನ್​ಜಿ) ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲದ ದರದಲ್ಲಿ ಇಳಿಕೆಯಾಗಲಿರುವ ಕಾರಣ, ಕಳೆದೊಂದು ದಶಕಕ್ಕೆ ಹೋಲಿಸಿದಲ್ಲಿ ಅತಿ ಕಡಿಮೆಯಾಗುವ ಸಾಧ್ಯತೆ ಇದೆ.

    ಹಣದುಬ್ಬರದ ಕಾರಣದಿಂದಾಗಿ ತೈಲ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಎಲ್​ಪಿಜಿ, ಸಿಎನ್​ಜಿ ಹಾಗೂ ಪಿಎನ್​ಜಿ ( ಕೊಳವೆ ಮೂಲಕ ಪೂರೈಸಲಾಗುವ ನೈಸರ್ಗಿಕ ಅನಿಲ) ಬೆಲೆಯಲ್ಲಿ ಇಳಿಕೆಯಾಗಲಿದೆ.

    ಇದನ್ನೂ ಓದಿ; ಅಕ್ಟೋಬರ್​ 4 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ 

    ನೈಸರ್ಗಿಕ ಅನಿಲದ ಬೆಲೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ನಿರ್ಧರಿಸಲಾಗುತ್ತದೆ. ಅದರಂತೆ ಪ್ರತಿ ಏಪ್ರಿಲ್​ ಹಾಗೂ ಅಕ್ಟೋಬರ್​ನಲ್ಲಿ ದರ ನಿಗದಿಯಾಗುತ್ತದೆ. ಅಕ್ಟೋಬರ್​ನಲ್ಲಿ ನಿಗದಿಯಾಗಬೇಕಾದ ಬೆಲೆ ಪ್ರತಿ ಎಂಎಂಬಿಟಿಯು ಗೆ (ಮೆಟ್ರಿಕ್​ ಮಿಲಿಯಲ್​ ಬ್ರಿಟಿಷ್​ ಥರ್ಮಲ್​ ಯೂನಿಟ್​) 1.90ದಿಂದ 1.94 ಡಾಲರ್​ ಆಸುಪಾಸಿನಲ್ಲಿರಲಿದೆ. ಇದು ಕಳೆದ ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆಯಾಗಿದೆ.

    ನೈಸರ್ಗಿಕ ಅನಿಲ ರಫ್ತು ಮಾಡುವ ರಾಷ್ಟ್ರಗಳು ಮೂಲಬೆಲೆಯನ್ನು ಬದಲಾಯಿಸಲಿವೆ. ಅಕ್ಟೋರ್​ 1 ರಿಂದ ಈ ಬೆಲೆ 1.84 ಡಾಲರ್​ಗೆ ಪರಿಷ್ಕರಣೆಯಾಗಲಿದೆ. ಇದು ಜಾರಿಯಾಗಿದ್ದೇ ಆದಲ್ಲಿ ಸತತ ಮೂರನೇ ಬಾರಿಗೆ ನೈಸರ್ಗಿಕ ಅನಿಲದ ಬೆಲೆ ಕಡಿಮೆಯಾದಂತಾಗಲಿದೆ. ಕಳೆದ ಏಪ್ರಿಲ್​ನಲ್ಲಿ ಪ್ರತಿ ಎಂಎಂಬಿಟಿಯುಗೆ 26 ಸೆಂಟ್​ ಇಳಿಕೆ ಮಾಡಿ 2.69 ಡಾಲರ್​ಗೆ ನಿಗದಿ ಮಾಡಲಾಗಿತ್ತು.

    ಹೊಸ ಅನಿಲ ಬೆಲೆ ಜಾರಿಗೆ ಬಂದಿದ್ದೇ ಆದಲ್ಲಿ ಎಲ್​ಪಿಜಿ, ಸಿಎನ್​ಜಿ ಹಾಗೂ ಪಿಎನ್​ಜಿ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.

    ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts