More

    ಪ್ರೇಮ ನಿವೇದನೆಗೆ ಹೀಗೊಂದು ‘ಮಾರ್ಗ’! ರಸ್ತೆ ಮೇಲೆ ‘ಐ ಲವ್ ಯು’!

    ಕೋಲ್ಹಾಪುರ : ಮಹಾರಾಷ್ಟ್ರದಲ್ಲಿ ಪ್ರೇಮಿಯೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ವಿಭಿನ್ನವಾದ ‘ಮಾರ್ಗ’ ಅನುಸರಿಸಿದ್ದಾರೆ. ಅದೆಂದರೆ, ರಾತ್ರಿಯೊಂದರಲ್ಲಿ ಸುಮಾರು ಎರಡೂವರೆ ಕಿಲೋಮೀಟರ್ ಉದ್ದ ರಸ್ತೆಯ ಮೇಲೆ ಐ ಲವ್​ ಯು, ಐ ಮಿಸ್ ಯು ಎಂದು ಬರೆಯುತ್ತಾ ಹೋಗಿರುವುದು! ಈ ಬಗೆಗಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಇತ್ತೀಚೆಗೆ ಕೋಲ್ಹಾಪುರ ಜಿಲ್ಲೆಯ ಧರಣಗುಟ್ಟಿ ಹಳ್ಳಿಯ ನಿವಾಸಿಗಳು ಬೆಳಗ್ಗೆ ಎದ್ದಾಗ ಈ ಅಜ್ಞಾತ ಪ್ರೇಮಿಯ ಬಹಿರಂಗ ಪ್ರೇಮ ನಿವೇದನೆ ರಸ್ತೆ ಮೇಲೆ ಕಾಣಿಸಿದೆ. ರಾಜ್ಯದ ಜೈಸಿಂಗ್​ಪುರದಿಂದ ಧರಣಗುಟ್ಟಿಗೆ ಹೋಗುವ ಟಾರ್ ರಸ್ತೆಯ ಮೇಲೆ ಬಿಳಿಯ ಬಣ್ಣದ ಆಯಿಲ್ ಪೇಂಟ್ ಬಳಸಿ, ‘ಐ ಲವ್ ಯು’, ‘ಐ ಮಿಸ್ ಯು’ ಎಂದು ಬರೆಯಲಾಗಿದೆ. ರಸ್ತೆಯಲ್ಲಿ ಸ್ವಲ್ಪ ಸ್ವಲ್ಪ ಅಂತರ ಬಿಟ್ಟು ಆಂಗ್ಲಭಾಷೆಯಲ್ಲಿ ಸಂದೇಶ ಬರೆದಿರುವ ಈ ಪ್ರೇಮಿ, ಒಂದೆಡೆಯಂತೂ “ಐ ಮಿಸ್ ಯು. ಜಿಂದಗಿ ಕೆ ಸಾಥ್, ಜಿಂದಗಿ ಕೆ ಬಾದ್ ಭೀ” ಎಂದು ಹಿಂದಿಯನ್ನೂ ಬಳಸಿ ಕಾವ್ಯಮಯವಾಗಿ ಬರೆದಿದ್ದಾರೆ.

    ಇದನ್ನೂ ಓದಿ: “ರಾಜ್ಯದಲ್ಲಿ ಲವ್​ ಜಿಹಾದ್, ಲ್ಯಾಂಡ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ”

    ಈವರೆಗೂ ಗುರುತು ಸಿಕ್ಕಿಲ್ಲದ ಈ ಪ್ರೇಮಿಯ ಭಾವೋದ್ವೇಗದ ಕೃತ್ಯದಿಂದ ಈಗ ಧರಣಗುಟ್ಟಿ ಗ್ರಾಮ ಪಂಚಾಯಿತಿ ನೌಕರರಿಗೆ ಹೊಸತೊಂದು ಕೆಲಸ ಬಿದ್ದಿದೆ. ಅದೆಂದರೆ, ತಾವೂ ಬಿಳಿಯ ಪೇಂಟ್ ಹಿಡಿದು ಈ ಪ್ರೇಮ ಸಂದೇಶಗಳನ್ನು ಮರೆ ಮಾಡುವುದು! (ಏಜೆನ್ಸೀಸ್)

    ‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

    ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

    ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts