More

    ನನಗೆ ಏನೂ ಬೇಡ… ಜೈಲಿನಲ್ಲೇ ಸಾಯಲು ಬಿಡಿ: ಜೆಟ್ ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯಲ್

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್ (ಜೆಐಎಲ್) ಸಂಸ್ಥಾಪಕ 74 ವರ್ಷದ ನರೇಶ್ ಗೋಯಲ್ ಅವರು ಜೀವನದ ಪ್ರತಿಯೊಂದು ಭರವಸೆಯನ್ನು ಕಳೆದುಕೊಂಡ ಕೋರ್ಟ್ ಸಮ್ಮುಖದಲ್ಲೇ ಕಣ್ಣೀರು ಹಾಕಿದ್ದಾರೆ.

    ಜೆಟ್ ಏರ್ವೇಸ್ ಸಂಸ್ಥೆ ಕೆನರಾ ಬ್ಯಾಂಕ್​ನಿಂದ ಪಡೆದ ಒಟ್ಟು 848.86 ಕೋಟಿ ರೂ ಮೊತ್ತದ ಸಾಲದ ಪೈಕಿ 538 ಕೋಟಿ ರೂನಷ್ಟು ಸಾಲ ಬಾಕಿ ಉಳಿಸಿಕೊಂಡಿದೆ. ಕೆನರಾ ಬ್ಯಾಂಕ್​ನಿಂದ ಪಡೆದ ಸಾಲವನ್ನು ನರೇಶ್ ಗೋಯಲ್ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಇದು ಅಕ್ರಮ ಹಣ ವರ್ಗಾವಣೆಯ ಪ್ರಕರಣ ಎನಿಸಿದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು.

    ಜಾಮೀನು ಅರ್ಜಿ ವಿಚಾರಣೆ ವೇಳೆ ಗೋಯಲ್ ವಿಶೇಷ ಕೋರ್ಟ್​ನ ನ್ಯಾಯಾಧೀಶರ ಬಳಿ ದುಃಖ ತೋಡಿಕೊಂಡು, ಜೈಲಿನಲ್ಲೇ ತನ್ನನ್ನು ಸಾಯಲು ಬಿಡಿ ಎಂದು ಕೈಮುಗಿದರು. ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಅನಾರೋಗ್ಯ ವಿಚಾರವಾಗಿ ಅವರ ದುಃಖ ಕೋರ್ಟ್​ನಲ್ಲಿ ಉಮ್ಮಳಿಸಿ ಬಂದಿತ್ತು. ನರೇಶ್ ಗೋಯಲ್​ರನ್ನು ಅಸಹಾಯಕ ಸ್ಥಿತಿಯಲ್ಲಿ ಇರಲು ಬಿಡುವುದಿಲ್ಲ ಎಂದು ಅದೇ ವೇಳೆ ನ್ಯಾಯಾಧೀಶರು ಭರವಸೆ ಕೂಡ ನೀಡಿದ್ದಾರೆ.

    ಕೋರ್ಟಿನ ಮುಂದೆ ಕೈಮುಗಿದು ನಮಸ್ಕರಿಸುತ್ತಾ ಗೋಯಲ್ ಅವರು, ಆರೋಗ್ಯವು ತುಂಬಾ ಕೆಟ್ಟದಾಗಿದೆ. ತನ್ನ ಕಾಲುಗಳು ಊದಿಕೊಂಡಿದ್ದು ನೋಯುತ್ತಿದೆ. ಕಾಲು ಮಡಚಲೂ ಕೂಡ ಆಗುವುದಿಲ್ಲ. ಮೂತ್ರ ಮಾಡುವಾಗ ಬಹಳ ನೋವಾಗುತ್ತದೆ. ಕೆಲವೊಮ್ಮೆ ಮೂತ್ರದಲ್ಲಿ ರಕ್ತವೂ ಬೆರೆತಿರುತ್ತದೆ. ಬಹಳಷ್ಟು ಬಾರಿ ತನಗೆ ಸಹಾಯವೇ ದೊರೆಯುವುದಿಲ್ಲ ಎಂದು ಹೇಳಿರುವ ನರೇಶ್ ಗೋಯಲ್, ತನ್ನ ಚಿಕಿತ್ಸೆಗೆ ಜೆಜೆ ಆಸ್ಪತ್ರೆಗೆ ಕಳುಹಿಸುವುದಕ್ಕೂ ಆಕ್ಷೇಪಿಸಿದ್ದಾರೆ. ಆರ್ಥರ್ ರೋಡ್ ಬಂದೀಖಾನೆಯ ಸಿಬ್ಬಂದಿ ವೇಳಾಪಟ್ಟಿ ಪ್ರಕಾರ ಇತರ ಜೈಲುವಾಸಿಗಳೊಂದಿಗೆ ಜೆಜೆ ಆಸ್ಪತ್ರೆಗೆ ಹೋಗುವುದು ಬಹಳ ತ್ರಾಸದ ಕೆಲಸ. ಆಸ್ಪತ್ರೆಯಲ್ಲಿ ರೋಗಿಗಳ ಉದ್ದುದ್ದ ಕ್ಯೂ ಇರುತ್ತದೆ. ಸಮಯಕ್ಕೆ ಸರಿಯಾಗಿ ವೈದ್ಯರು ಸಿಗುವುದಿಲ್ಲ. ಫಾಲೋ ಅಪ್ ಕೂಡ ಸಾಧ್ಯವಾಗುವುದಿಲ್ಲ. ಇದರಿಂದ ತನ್ನ ಆರೋಗ್ಯಕ್ಕೆ ಇನ್ನಷ್ಟು ಬಾಧೆಯಾಗುತ್ತಿದೆ ಎಂದು ನರೇಶ್ ಗೋಯಲ್ ದುಃಖ ತೋಡಿಕೊಂಡಿದ್ದಾರೆ. ತನ್ನ ಪತ್ನಿ ಅನಿತಾ ಕ್ಯಾನ್ಸರ್ ರೋಗದ ಕೊನೆಯ ಸ್ಟೇಜ್​ನಲ್ಲಿದ್ದಾರೆ. ತನ್ನ ಏಕೈಕ ಮಗಳಿಗೂ ಅನಾರೋಗ್ಯ ಇದೆ. ಪತ್ನಿಯನ್ನು ನೋಡಿಕೊಳ್ಳಲು ಯಾರೂ ಇಲ್ಲವಾಗಿದೆ. ತನಗೆ ಬದುಕಿನ ಬಗ್ಗೆ ಭರವಸೆಯೇ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ಇರುವ ತನಗೆ ಜೈಲಿನಲ್ಲೇ ಸಾಯುವುದು ಮೇಲೆನಿಸುತ್ತದೆ ಎಂದು ಅವರು ಹೇಳಿದ್ದಾರೆ.

    ನರೇಶ್ ಗೋಯಲ್ ಅವರ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಸ್ಪಂದಿಸಿ, ಉತ್ತರವನ್ನು ಕೋರ್ಟ್​ಗೆ ಸಲ್ಲಿಸಿದೆ. ಜನವರಿ 16ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

    ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಮಾತನಾಡಿ, ‘‘ಅನಾರೋಗ್ಯದ ಹಂತದಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ. ಅವರ ಆರೋಗ್ಯದ ಬಗ್ಗೆ ಎಲ್ಲವನ್ನೂ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಲಯ ಅವರಿಗೆ ಭರವಸೆ ನೀಡಿದೆ. ಗೋಯಲ್ ಅವರು ಸೆಪ್ಟೆಂಬರ್ 14 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

    ನಿಂತ ಭಂಗಿಯಲ್ಲಿರುವ ಕಪ್ಪು ಶಿಲೆಯ ರಾಮ್ ಲಲ್ಲಾ ವಿಗ್ರಹ ಆಯ್ಕೆ : ಚಂಪತ್ ರಾಯ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts