ವಿಜಯಪುರ: ಲಾರಿ ಮಾತ್ರ ಕೆಟ್ಟಿರಲಿಲ್ಲ, ಬಹುಶಃ ಲಾರಿ ಚಾಲಕನ ಗ್ರಹಚಾರ ಕೂಡ ಕೆಟ್ಟಿರಬೇಕು. ಏಕೆಂದರೆ ಕೆಟ್ಟು ನಿಂತಿದ್ದ ಲಾರಿಯನ್ನು ರಿಪೇರಿ ಮಾಡುತ್ತಿದ್ದ ಚಾಲಕ ನಿಂತ ಜಾಗದಲ್ಲೇ ಮರಳಿ ಬಾರದ ಲೋಕಕ್ಕೆ ಹೋಗುವಂತಾಗಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಈ ಪ್ರಕರಣದಲ್ಲಿ ಧ್ಯಾನ್ಸಿಂಗ್ (45) ಎಂಬ ಲಾರಿ ಚಾಲಕ ಮೃತಪಟ್ಟಿದ್ದಾನೆ.
ಮಧ್ಯಪ್ರದೇಶ ಮೂಲದ ಈತ ಚಲಾಯಿಸುತ್ತಿದ್ದ ಲಾರಿ ಕೆಟ್ಟಹೋಗಿತ್ತು. ಏನಾಗಿದೆ ನೋಡೋಣ ಎಂದು ರಿಪೇರಿಗೆ ಮುಂದಾಗಿದ್ದ ಈತನಿಗೆ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಲಾರಿಯ ಚಾಲಕನಿಗೂ ಗಾಯಗಳಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಕಾರಣ ಇದೇನಾ?