More

    ಬಿಜೆಪಿ ಗೆಲುವಿಗೆ ವಾರಿಯರ್ ಆಗಿ ಕೆಲಸ ಮಾಡೋಣ

    ಧಾರವಾಡ: ಬಿಜೆಪಿ ಬಾಡಿಗೆ ಕಾರ್ಯಕರ್ತರ ಪಕ್ಷವಲ್ಲ. ವೈಯಕ್ತಿಕ ಲಾಭ, ಯೋಚನೆ ಬಿಟ್ಟು ಪ್ರತಿಯೊಬ್ಬರೂ ಅಭ್ಯರ್ಥಿ ಎಂದುಕೊAಡು ವಾರಿಯರ್ ಆಗಿ ಕೆಲಸ ಮಾಡೋಣ. ಜೋಶಿಯವರ ಗೆಲುವು ನಮ್ಮೆಲ್ಲರ ಗೆಲುವು ಎಂಬ ಮನೋಭಾವವಿದ್ದಾಗ ಮತ್ತೊಮ್ಮೆ ಜಯ ಖಚಿತ ಎಂದು ಹಿರಿಯ ಉದ್ಯಮಿ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
    ನಗರದ ಮರಾಠಾ ಕಾಲನಿಯ ಸರೂರ ಬಿಲ್ಡಿಂಗ್‌ನಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾಯÁðಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಈ ಕ್ಷೇತ್ರವನ್ನು ನಾನು ೩ ಬಾರಿ ಹಾಗೂ ಜೋಶಿಯವರು ೫ ಬಾರಿ ನಿರಂತರವಾಗಿ ಪ್ರತಿನಿಽಸಿದ್ದಾರೆ. ಬಿಜೆಪಿ ಗೆಲುವು ಡಜನ್ ಮೀರಬೇಕು. ಹಿಂದೆ ಭಾರತೀಯರು ಎನ್ನಲು ಮುಜುಗರ ಪಡುವ ಪರಿಸ್ಥಿತಿ ಇತ್ತು. ಇಂದು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಭಾರತೀಯರು ಹೆಮ್ಮೆ ಪಡುವಂತಾಗಿದೆ ಎಂದರು.
    ಸAಸದರಾಗಿ ಸತತ ೨೦ ವರ್ಷ ಪೂರೈಸಿರುವ ಜೋಶಿಯವರು ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಷಾಗೆ ಹತ್ತಿರದ ವ್ಯಕ್ತಿ. ಅವರ ಭೇಟಿ ಸುಲಭವಲ್ಲ ಎಂಬ ಮಾತಿದೆ. ಆದರೆ, ಕೇಂದ್ರದ ಪ್ರಭಾವಿ ಖಾತೆ ನಿರ್ವಹಿಸುತ್ತಿರುವ ಅವರ ಒತ್ತಡದ ಕೆಲಸವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಪ್ರತಿ ಬಾರಿ ಚುನಾವಣಾ ಕಾಯÁðಲಯಕ್ಕೆ ತಮ್ಮ ಕಟ್ಟಡ ನೀಡುವ ಸುನೀಲ ಸರೂರ ಸೇವೆ ಸ್ಮರಣೀಯ ಎಂದರು.
    ಕೇAದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಂಕೇಶ್ವರರು ಈ ಕ್ಷೇತ್ರ ಗೆದ್ದು ವಿಜಯಶ್ರೀ ಹಾಕಿಕೊಟ್ಟರು. ಅಲ್ಲಿಂದ ಬಿಜೆಪಿ ೭ ಬಾರಿ ಗೆದ್ದಿದೆ. ಹಿಂದೊಮ್ಮೆ ವಿಧಾನಸೌಧ ಪ್ರವೇಶಕ್ಕೆ ನಿರಾಕಸಿಸಲ್ಪಟ್ಟಿದ್ದ ನನಗೆ ಕೇಂದ್ರ ಸಂಪುಟದ ಉನ್ನತ ಸ್ಥಾನ ನಿಭಾಯಿಸುವ ಶಕ್ತಿ ನೀಡಿದ್ದು ಕಾರ್ಯಕರ್ತರು. ಸಂಸದೀಯ ವ್ಯವಹಾರಗಳ ಖಾತೆಯನ್ನು ೫ ವರ್ಷ ಪೂರೈಸಿದ ೩ನೇ ಸಚಿವ ನಾನು ಎಂಬುದಕ್ಕೆ ಹೆಮ್ಮೆ ಇದೆ. ಪಕ್ಷದ ಹಿರಿಯರು, ಕಾರ್ಯಕರ್ತರು ತಲೆತಗ್ಗಿಸುವಂಥ ಕೆಲಸ ಮÁಡಿಲ್ಲ ಎಂದರು.
    ಐಐಟಿ, ಐಐಐಟಿ ಸ್ಥಾಪನೆ, ಜಲಜೀವನ್ ಮಿಶನ್ ಮೂಲಕ ಪ್ರತಿ ಮನೆಗೆ ನೀರು, ಹುಬ್ಳಳ್ಳಿ ಏರ್‌ಪೋರ್ಟ್ ಅಭಿವೃದ್ಧಿ, ಕಾಂಕ್ರೀಟ್ ರಸ್ತೆಗಳು, ಗದಗ ಚತುಷ್ಪಥ ರಸ್ತೆ, ಕೋವಿಡ್ ನಿರ್ವಹಣೆಯನ್ನು ಜನ ಮೆಚ್ಚಿದ್ದಾರೆ. ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ವಿರೋಽಗಳೂ ಹೇಳುವುದಿಲ್ಲ. ಕ್ಷೇತ್ರದಲ್ಲಿ ಇನ್ನೂ ಆಗಬೇಕಾದುದು ಬಹಳ ಇದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
    ಶಾಸಕ ಅರವಿಂದ ಬೆ¯್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ ಮತ್ತು ಸೀಮಾ ಮಸೂತಿ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಹಾಗೂ ಕಾರ್ಯಕರ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts