More

    ಲೋಕಸಭೆ ಚುನಾವಣೆ, ಜಿಲ್ಲೆಯಲ್ಲಿ ಮೇ.7 ರಂದು ಮತದಾನ, ಜೂ. 4 ರಂದು ಫಲಿತಾಂಶ,

    ವಿಜಯವಾಣಿ ಸುದ್ದಿಜಾಲ ಗದಗ
    ಕೇಂದ್ರ ಚುನಾವಣಾ ಆಯೋಗ ಘೋಷಿಸಿದಂತೆ ಜಿಲ್ಲೆಯಲ್ಲಿ ಮೂರನೇ ಹಂತದ ಮೆ.7 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಜೂನ್​ 4 ರಂದು ಲಿತಾಂಶ ಹೊರ ಬರಲಿದೆ ಎಂದು ಜಿಲಾಧಿಕಾರಿ ವೈಶಾಲಿ ಎಂ.ಎಲ್​ ಹೇಳಿದರು.
    ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಮುಂಬರುವ 72 ಗಂಟೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕಟ್ಟಡ ಸೇರಿದಂತೆ ಜಿಲ್ಲೆಯಲ್ಲಿ ಅಳವಡಿಸಿರುವ ಪೋಸ್ಟರ್​, ಬ್ಯಾನರ್​ಗಳನ್ನು ತೆರವುಗೊಳಿಸಲಾಗುವುದು. ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ರೋಣ, ಗದಗ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ನರಗುಂದ ವಿಧಾನಸಭಾ ಕ್ಷೇತ್ರ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಒಳಪಡುತ್ತದೆ. ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳು ಲೋಕಸಭೆ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
    4 ವಿಡಿಯೋ ವಿಚಕ್ಷಣಾ ದಳ ಕಾರ್ಯ ನಿರ್ವಹಿಸಲಿವೆ. ಪ್ರತಿ ಅಭ್ಯಥಿರ್ಯ ಖರ್ಚು ವೆಚ್ಚ ಕುರಿತು ನಿಗಾ ಇಡಲು ಪ್ರತಿ ವಿಧಾಸಭಾ ಕ್ಷೇತ್ರಕ್ಕೆ 2 ಲೆಕ್ಕ ತಂಡ, ಒಬ್ಬರು ಸಹಾಯಕ ವೆಚ್ಚ ಅಧಿಕಾರಿಗಳುಗಳನ್ನು ನಿಯೋಜನೆ ಮಾಡಲಾಗಿದೆ. ದೂರುಗಳನ್ನು ಸ್ವೀಕರಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. 1950 ನಂಬರ್​ ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ತಿಳಿಸಿದರು.
    ಜಿಲ್ಲಾ ಪೊಲೀಸ್​ ಎಸ್ಪಿ ಬಿ.ಎಸ್​. ನೇಮಗೌಡ ಮಾತನಾಡಿ, ಜಿಲ್ಲೆಯಲ್ಲಿ 12 ಚೆಕ್​ ಪೋಸ್ಟ್​ ಗಳನ್ನು ನಿಮಿರ್ಸಲಾಗಿದೆ. 10 ಚೆಕ್​ ಪೋಸ್ಟ್​ಗಳಿ ಹಾವೇರಿ ಲೋಕಸಭಾ, 2 ಚೆಕ್​ ಪೋಸ್ಟ್​ಗಳು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ದಿನ 24 ಗಂಟೆ ಚೆಕ್​ ಪೋಸ್ಟ್​ ನಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಒಟ್ಟಾರೆ 1500 ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ತೋಡಗಿಸಿಕೊಳ್ಳಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 9 ಸಂಚಾರಿ ದಳಗಳು ಸೇರಿದಂತೆ ಒಟ್ಟು 36 ಸಂಚಾರಿ ದಳಗಳು ಕಾರ್ಯ ನಿರ್ವಹಿಸಲಿವೆ ಎಂದರು.
    ಜಿಲ್ಲೆಯ ಅಲ್ಪಸಂಖ್ಯಾತ ಇಲಾಖಾ ಅಧಿಕಾರಿಗಳು ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ಚುನಾವಣಾ ಅಧಿಕಾರಿಗಳಾಗಿ, ಗದಗ ಕ್ಷೇತ್ರಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿಗಳು, ರೋಣ ಕ್ಷೇತ್ರಕ್ಕೆ ಡಿಯುಡಿಸಿ ಯೋಜನಾ ನಿರ್ದೇಶಕರು, ನರಗುಂದ ಕ್ಷೇತ್ರಕ್ಕೆ ಆಹಾರ ಇಲಾಖೆಯ ಉಪ ನಿರ್ದೇಶಕರು ಸಹಾಯಕ ನಿರ್ದೇಶಕರು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು. ಜಿಲ್ಲಾ ನೋಡಲ್​ ಅಧಿಕಾರಿಗಳಾಗಿ ಜಿಪಂ ಸಿಇಒ ಭರತ್​ ಎಸ್​ ಎಂದು ಹೇಳಿದರು

    ಕೋಟ್​:
    ಚುನಾವಣಾ ಆಯೋಗದ ವೇಳಾಪಟ್ಟಿ ಪ್ರಕಟ ನಂತರ ನಾಮ ಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಹಿಂದಿನ 10 ದಿನಗಳ ಮುಂಚಿತವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಲು ಅರ್ಹ ಮತದಾರರು ಅಜಿರ್ ಸಲ್ಲಿಸುವ ಅವಕಾಶ ಇದೆ. ಅರ್ಹರು ಸದುಪಯೋಗ ಪಡೆದುಕೊಳ್ಳಬೇಕು – ವೈಶಾಲಿ ಎಂ.ಎಲ್​. ಜಿಲ್ಲಾಧಿಕಾರಿ

    ಚುನಾವಣಾ ಪ್ರಕ್ರಿಯೆ:
    ನಾಮಪತ್ರ ಸಲ್ಲಿಕ್ಕೆ – ಏಪ್ರಿಲ್​ 12, 2024 ರಿಂದ ಆರಮಭ
    ನಾಮಪತ್ರ ಕೊನೆಯ ದಿನಾಂಕ – ಏಪ್ರಿಲ್​ 19
    ನಾಮಪತ್ರ ಪರಿಶೀಲನೆ – ಏಪ್ರಿಲ್​ 20
    ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ – ಏಪ್ರಿಲ್​ 22
    ಮತದಾನ ಮೇ 7, 2024
    ಲಿತಾಂಶ ಜೂನ್​ 4, 2024

    ಜಿಲ್ಲೆಯ ಮತದಾರ ಸಂಖ್ಯೆ:
    ಮಹಿಳಾ ಮತದಾರರು 440749
    ಪುರುಷ ಮತದಾರರು 439603

    ಜಿಲ್ಲೆಯ ಹಾವೇರಿ ಲೋಕಸಭಾ ಮತದಾರ ಸಂಖ್ಯೆ 690227, ಜಿಲ್ಲೆಯ ಬಾಗಲಕೋಟೆ ಲೋಕಸಭಾ ಮತದಾರ ಸಂಖ್ಯೆ 190187, 18-19 ವಯೋಮಾನದ ಮತದಾರರು 23665, ದಿವ್ಯಾಂಗ ಚೇತನ ಮತದಾರರು 11897, 85 ವರ್ಷ ಮೀರಿದ ಮತದಾರರು 5747

    ಮತಗಟ್ಟೆಗಳ ಸಂಖ್ಯೆ:
    ಶಿರಹಟ್ಟಿ – 251
    ಗದಗ – 223
    ರೋಣ – 267
    ನರಗುಂದ – 220 ಒಟ್ಟು 961


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts