ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

blank
blank

ಲೋಕಾಪುರ: ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಆರೋಗ್ಯ ಇಲಾಖೆ ನೌಕರರ ಕಾರ್ಯ ಶ್ಲಾಘನೀಯ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಹೇಳಿದರು.

ಪಟ್ಟಣದಲ್ಲಿ ಈದ್ ಮಿಲಾದ್ ಪ್ರಯುಕ್ತ ತೊರಗಲ್ ವಿವಿಧೋದ್ದೇಶ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತೆಯರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತ್ರಕರ್ತ ಹಸನಡೋಂಗ್ರಿ ಮಹಾಲಿಂಗಪುರ ಮಾತನಾಡಿದರು. ಸಯೀದಮ್ಮ ನದಾಫ್, ರುಕ್ಮೀಣಿ ಗಸ್ತಿ, ರೇಣುಕಾ ಕಾಳಮ್ಮನವರ, ಅನ್ನಪೂರ್ಣ ದಾಸರ, ಮಂಜುಳಾ ಪರಸಣ್ಣನವರ, ನಾಗರತ್ನಾ ವಡ್ಡರ, ಮಂಜುಳಾ ಮುದ್ದಾಪುರ, ರೇಣುಕಾ ಭಜಂತ್ರಿ, ಸವಿತಾ ಕಾಂಬಳೆ, ಗೀತಾ ನಂದಿಕೋಲಮಠ, ರಂಗವ್ವ ಪೂಜಾರ, ದುರ್ಗವ್ವ ತಳವಾರ ಅವರನ್ನು ಸನ್ಮಾನಿಸಲಾಯಿತು.

ದುರಗಪ್ಪ ಕಲಬಂದಕೇರಿ, ಹಸನ್ ಅರಳಿಗಿಡದ, ಅಬ್ದುಲ್ ರೆಹಮಾನ ತೋರಗಲ್, ರಜಾಕ ತೋರಗಲ್, ಅಜ್ಮೀರ ಮಕ್ತೆದಾರ, ಸುಲ್ತಾನ ಸಲೀಂ, ಡಾ.ವಿನಯ ಕುಲಕರ್ಣಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…