More

    ವಿವಿಧ ಕಾಮಗಾರಿ ಶೀಘ್ರ ಆರಂಭ

    ಲೋಕಾಪುರ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ 13 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ಸ್ಥಳೀಯ ಸುಭಾಷ ನಗರದಲ್ಲಿ 1.30 ಕೋಟಿ ರೂ. ವೆಚ್ಚದ ಸಿಸಿ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದಲ್ಲಿ 5.65 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿಗಳ ಪಕ್ಕದಲ್ಲಿ ಚರಂಡಿ ನಿರ್ಮಾಣ, 2.67 ಕೋಟಿ ವೆಚ್ಚದಲ್ಲಿ ಹಳೇ ಕೆಜಿಎಸ್ ಶಾಲೆಯನ್ನು ನೆಲಸಮಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣ, 2.40 ಕೋಟಿ ರೂ. ವೆಚ್ಚದಲ್ಲಿ ಪಿಡಬ್ಯ್ಲುಡಿ ವಸತಿ ಗೃಹವನ್ನು ನೆಲಸಮಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಾಣ, 90 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಸುಣ್ಣದ ಕಲ್ಲಿನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ತಾಣವಾಗಿರುವ 20 ಹಳ್ಳಿಗಳಿಗೆ ಕೇಂದ್ರ ಸ್ಥಾನವಾದ ಲೋಕಾಪುರವನ್ನು ಸುಂದರವನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಪಟ್ಟಣವನ್ನಾಗಿ ಮಾಡುವ ಆಸೆ ಇದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಊರಿನ ರಸ್ತೆ, ಚರಂಡಿಗಳನ್ನು ನಿರ್ಮಿಸುವಾಗ ಜನತೆ ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.

    ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿ ನಿಗದಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬಿಜೆಪಿ ಮುಖಂಡ ಹನುಮಂತ ತುಳಸಿಗೇರಿ, ಗುರುರಾಜ ಕಟ್ಟಿ, ಶಿವನಗೌಡ ನಾಡಗೌಡ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಬಿ.ಎಲ್. ಬಬಲಾದಿ, ವೀರೇಶ ಪಂಚಕಟ್ಟಿಮಠ, ವಿ.ಎಂ. ತೆಗ್ಗಿ, ಕಾಶಲಿಂಗ ಮಾಳಿ, ಅಡಿವೆಪ್ಪ ಕೃಷ್ಣಗೌಡರ, ಸಿ.ಎ. ಪಾಟೀಲ, ಕಿಷ್ಟಪ್ಪ ಕತ್ತಿ, ಬಿ.ಬಿ. ನಾಡಗೌಡ, ಕೃಷ್ಣಾ ಸಾಳುಂಕಿ, ಮಲ್ಲಪ್ಪ ಅಂಗಡಿ, ವಿನೋದ ಘೋರ್ಪಡೆ, ಹನುಮಂತಗೌಡ ಪಾಟೀಲ, ಬೀರಪ್ಪ ಮಾಯನ್ನವರ, ಬಿ.ಸಿ. ಮಾಳಿ, ಗೋಪಾಲಗೌಡ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಎಸ್. ಸಾವನ್, ಸಹಾಯಕ ಇಂಜಿನಿಯರ್‌ಗಳಾದ ಅಶೋಕ ಕ್ಯಾದಗಿರಿ, ವಿನೋದ ಸಂಕೆನ್ನವರ, ಪಿಡಿಒ ಸುಭಾಷ ಗೋಲಶೆಟ್ಟಿ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts