More

    ಲಾಕ್​ಡೌನ್​ ವಿಸ್ತರಿಸುವ ಹಲವು ರಾಜ್ಯಗಳ ಮನವಿಯ ಪರಿಶೀಲಿಸುತ್ತಿದೆ ಕೇಂದ್ರ ಸರ್ಕಾರ, ಜಾರಿಯಾದರೆ ಇನ್ನಷ್ಟು ಕಾಲ ಮನೆಯೇ ಮಂತ್ರಾಲಯ

    ನವದೆಹಲಿ: ಕರೊನಾ ವೈರಸ್​ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ದೇಶಾದ್ಯಂತ ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಘೋಷಿಸಿದೆ. ಇಷ್ಟಾದರೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಅನ್ನು ಇನ್ನಷ್ಟು ಕಾಲ ಮುಂದುವರಿಸಬೇಕು ಎಂದು ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.
    ಇದೀಗ ರಾಜ್ಯ ಸರ್ಕಾರಗಳ ಈ ಮನವಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಅನ್ನು ಮುಂದುವರಿಸುವ ಒಲವು ತೋರುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಕರ್ನಾಟಕದಲ್ಲಿ ಕೂಡ ಏಪ್ರಿಲ್​ 14ರ ನಂತರದಲ್ಲಿ ಲಾಕ್​ಡೌನ್​ ಅಂತ್ಯಗೊಳಿಸುವಂತೆ ಮಾಡುವ ಬಯಕೆ ಇದ್ದರೆ ಜನರು ಕೋವಿಡ್​ 19 ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಹಕರಿಸಬೇಕು. ಇನ್ನೊಂದು ವಾರ ಲಾಕ್​ಡೌನ್​ನ ನಿಯಮವನ್ನು ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಅವಧಿಯಲ್ಲಿ ಸಹಕಾರ ವ್ಯಕ್ತವಾದರೆ, ಆದಷ್ಟು ಬೇಗ ಲಾಕ್​ಡೌನ್​ ಅನ್ನು ತೆರವುಗೊಳಿಸಲು ಅನುಕೂಲವಾಗುತ್ತದೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

    ಅಲ್ಲದೆ, ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ್ದ ತೆಲಂಗಾಣ ಸಿಎಂ ಚಂದ್ರಶೇಖರ ರಾವ್​, ಲಾಕ್​ಡೌನ್​ ಅನ್ನು ಜೂನ್​ವರೆಗೆ ಮುಂದುವರಿಸಬೇಕು. ಪ್ರಾಣಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು. ಆನಂತರದಲ್ಲಿ ಬೇಕಾದರೆ ಆರ್ಥಿಕ ವ್ಯವಸ್ಥೆಯನ್ನು ಪುನರುತ್ಥಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.

    ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ಕೋವಿಡ್​ 19 ಉಲ್ಬಣಿಸುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಲಾಕ್​ಡೌನ್​ ಅನ್ನು ಏಪ್ರಿಲ್​ 14ರ ನಂತರವೂ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಲಾಕ್‌ಡೌನ್‌ ನಡುವೆ ನಡೆಯಿತು ವಿವಾಹ: ನವ ದಂಪತಿಗೆ ಕಾದಿತ್ತು ಶಾಕ್‌, ಈಗ ಠಾಣೆಯಲ್ಲಿ ಲಾಕ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts