More

    ಯಳಂದೂರಿನಲ್ಲಿ ಜನೌಷಧ ಕೇಂದ್ರಕ್ಕೆ ಬೀಗ

    ಡಿ.ಪಿ.ಮಹೇಶ್ ಯಳಂದೂರು
    ಬಡವರ ಸೇವೆಗಾಗಿ ಪ್ರಾರಂಭಿಸಲಾಗಿದ್ದ ಪ್ರಧಾನ ಮಂತ್ರಿ ಜನೌಷಧ ಕೇಂದ್ರವನ್ನು ಯಾವುದೇ ಕಾರಣ ನೀಡದೇ ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡ ಜನರು ಜನೌಷಧ ಸೌಲಭ್ಯದಿಂದ ವಂಚಿತರಾಗಿದ್ದಾರೆ.

    ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 3 ವರ್ಷ ಹಿಂದೆ ಭಾರತೀಯ ಜನೌಷಧ ಕೇಂದ್ರದ ಮಳಿಗೆಯನ್ನು ತೆರೆಯಲಾಗಿತ್ತು. ಆದರೆ 1 ಒಂದು ವರ್ಷದಿಂದ ಇದರ ಬಾಗಿಲೇ ತೆರೆದಿಲ್ಲ. ಹಾಗಾಗಿ ರೋಗಿಗಳು ಹೆಚ್ಚಿನ ದರದಲ್ಲಿ ಔಷಧವನ್ನು ಖಾಸಗಿ ಮೆಡಿಕಲ್ ಷಾಪ್‌ಗಳಿಂದ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಔಷಧ ಕೇಂದ್ರವನ್ನು ಗುತ್ತಿಗೆ ಪಡೆದ ಎಂಐಎಸ್‌ಎಲ್ ಸಂಸ್ಥೆಯು ಔಷಧ ಕೇಂದ್ರವನ್ನು ಗುತ್ತಿಗೆ ಪಡೆದು ಪ್ರಾರಂಭಿಸಿತ್ತು. ವೈದ್ಯರು ಬರೆಯುವ ಕೆಲ ಔಷಧಗಳನ್ನು ಆಸ್ಪತ್ರೆಯಲ್ಲೇ ನೀಡಲಾಗುತ್ತದೆ. ಆದರೆ ಕೆಲವನ್ನು ಹೊರಗಡೆ ತೆಗೆದುಕೊಳ್ಳಲು ವೈದ್ಯರು ಚೀಟಿ ನೀಡುತ್ತಾರೆ. ಭಾರತೀಯ ಜನೌಷಧ ಕೇಂದ್ರ ಮಳಿಗೆಯಲ್ಲಿ ಇಂತಹ ಅನೇಕ ಔಷಧಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಇದು ಬಡವರಿಗೆ ಅನುಕೂಲವಾಗಲೆಂದೇ ತೆರೆದಿರುವ ಮಳಿಗೆಗಳಾಗಿವೆ. ಆದರೆ ಹಲವು ತಿಂಗಳಿಂದ ತಾಲೂಕಿನಲ್ಲಿರುವ ಏಕೈಕ ಜನೌಷಧ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದರೂ ಇನ್ನೂ ತೆರೆಯಲು ಕ್ರಮ ವಹಿಸಿಲ್ಲ. ಸಂಬಂಧಪಟ್ಟ ಆರೋಗ್ಯ ಇಲಾಖೆಯ ಈ ಬಗ್ಗೆ ಕಾಳಜಿ ವಹಿಸಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
    ಡ್ರಗ್ ಮಾಫಿಯಾಗೆ ಬಲಿಯಾಗಿದೆಯೇ ಕೇಂದ್ರ: ಬಡವರ ಪಾಲಿಗೆ ಬಂಗಾರವಾಗಬೇಕಿದ್ದ ಈ ಜನೌಷಧ ಕೇಂದ್ರ ಡ್ರಗ್ ಮಾಫಿಯಾಗೆ ಬಲಿಯಾಯಿತೆ ಎನ್ನುವ ಅನುಮಾನ ತಾಲೂಕಿನಾದ್ಯಂತ ಹುಟ್ಟಿಕೊಂಡಿದೆ. ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಬಡರೋಗಿಗಳಿಗೆ ಜನೌಷಧ ಕೇಂದ್ರಗಳನ್ನು ತೆರೆದು ದುಬಾರಿ ಔಷಧಗಳನ್ನು ಶೇ.80ರಷ್ಟು ಕಡಿಮೆ ಬೆಲೆಗೆ ಮಾರಟ ಮಾಡುವ ಮೂಲಕ ಬಡವರ ಪಾಲಿನ ಸಂಜೀವಿನಿಯಾಗಿತ್ತು.ಆದರೆ ನಗರದ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿರುವ ಈ ಜನೌಷಧ ಕೇಂದ್ರ ಸ್ಥಗಿತವಾದಾಗಿನಿಂದ ಬಡವರ ಪಾಲಿನ ಸೌಲಭ್ಯ ಸಿಗದಂತಾಗಿದೆ. ಇದರಿಂದ ದುಬಾರಿ ಹಣ ನೀಡಿ ಔಷಧ ಖರೀದಿಸುವಂತಾಗಿದೆ.

    ತಾಲೂಕಿನ ಬಡವರ್ಗದ ಜನರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಕಡಿಮೆ ಬೆಲೆಯ ಔಷಧಿಗಳನ್ನು ಹೆಚ್ಚು ಹಣವನ್ನು ನೀಡಿ ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿಸಬೇಕಾದ ಪರಿಸ್ಥಿತಿ ಇದ್ದು, ಇದರಿಂದ ಸಾವಿರಾರು ಜನರಿಗೆ ಉಪಯೋಗವಾಗುತ್ತಿದ್ದ ಮಳಿಗೆಯನ್ನು ಏಕಾಏಕಿ ಮುಚ್ಚಿರುವುದರಿಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಕೂಡಲೇ ಮುಚ್ಚಿರುವ ಔಷಧ ಕೇಂದ್ರವನ್ನು ತಕ್ಷಣ ಪ್ರಾರಂಭಿಸಲು ಗಮನಹರಿಸಬೇಕಾಗಿದೆ.
    ಪ್ರಕಾಶ್, ಸಾರ್ವಜನಿಕ

    ಪಟ್ಟಣದ ಸಾರ್ವಜನಿಕರ ಆಸ್ಪತ್ರೆ ಆವರಣದಲ್ಲಿ ಎಂಐಎಸ್‌ಎಲ್ ಸಂಸ್ಥೆಯು ಗುತ್ತಿಗೆ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಹಲವು ತಿಂಗಳ ಹಿಂದೆ ಏಕಾಏಕಿ ಬಾಗಿಲು ಮುಚ್ಚಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಔಷಧ ಕೇಂದ್ರವನ್ನು ತೆರೆಯಬೇಕೆಂದು ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನೌಷಧ ಕೇಂದ್ರವನ್ನು ತೆರೆಯಲು ಕ್ರಮ ವಹಿಸಲಾಗುವುದು.
    ಡಾ.ಶ್ರೀಧರ್, ತಾಲೂಕು ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
    ಯಳಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts