More

    ಅಕ್ರಮ ಮೀನು ಕಟ್ಟಿಂಗ್ ಘಟಕಕ್ಕೆ ವಿರೋಧ: ಸ್ಥಳೀಯರ ಪ್ರತಿಭಟನೆ ಬಳಿಕ ಕಾರ್ಯಾಚರಣೆ ನಿಲ್ಲಿಸುವ ಭರವಸೆ

    ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕರೆ ಸರ್ಕಲ್ ಬಳಿ ಖಾಸಗಿ ಮೀನು ಸಂಸ್ಕರಣಾ ಘಟಕ ಅಕ್ರಮವಾಗಿ ಮೀನು ಕಟ್ಟಿಂಗ್ ಆರಂಭಿಸುವುದರ ವಿರುದ್ಧ ಸ್ಥಳೀಯರಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

    ಎರಡು ಮೂರು ದಿನಗಳಿಂದ ಪಂಚಾಯಿತಿ ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಮೀನು ಕಟ್ಟಿಂಗ್ ಸಂಸ್ಕರಣಾ ಘಟಕ ಆರಂಭಿಸುವುದನ್ನು ಗಮನಿಸಿದ ಸ್ಥಳೀಯರು ಶೈಕ್ಷಣಿಕ ಪ್ರದೇಶವಾಗಿ ಈ ಭಾಗ ಅಭಿವೃದ್ಧಿಗೊಳ್ಳುತ್ತಿದೆ. ಮೀನು ಕಟ್ಟಿಂಗ್‌ನಿಂದ ಅತಿಯಾದ ವಾಸನೆ, ಪರಿಸರ ಮಲಿನಗೊಳ್ಳುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಕೂಡಲೆ ಬಂದ್ ಮಾಡಿ ಇಲ್ಲವಾದಲ್ಲಿ ಧರಣಿ ಕೂರುವುದಾಗಿ ಎಚ್ಚರಿಸಿದರು.

    ಮನವೊಲಿಕೆ ಯತ್ನ: ಕಟ್ಟಿಂಗ್ ಕಾರ್ಖಾನೆ ಮುಖ್ಯಸ್ಥ ಕೇಶವ ಕುಂದರ್ ಮಧ್ಯಪ್ರವೇಶಿಸಿ, ಎರಡು ತಿಂಗಳು ಮಾತ್ರ ಇಲ್ಲಿ ಕಾರ್ಯರ್ನಿಹಿಸುತ್ತೇವೆ, ನಂತರ ಬೇರೆಡೆ ಸ್ಥಳಾಂತರಿಸುತ್ತೇವೆ. ಪ್ರತಿಭಟನೆ ಕೈಬಿಡಿ ಎಂದು ಸ್ಥಳೀಯರಲ್ಲಿ ಮನವಿ ಮಾಡಿದರು. ಇದಕ್ಕೂ ಜಗ್ಗದ ಸ್ಥಳೀಯರು ಪ್ರಸ್ತುತ ಇಲ್ಲಿರುವ ಕಾರ್ಖಾನೆಗಳೇ ಸಾಕು. ಮತ್ತೆ ಹೊಸದಾಗಿ ಅವಕಾಶ ಕಲ್ಪಿಸಲಾರೆವು. ಪಂಚಾಯಿತಿ ಲೈಸನ್ಸ್ ಪಡೆಯದೆ ಕಾರ್ಯನಿರ್ವಹಿಸುತ್ತಿರುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಈ ವೇಳೆ ಕೇಶವ ಕುಂದರ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.

    ಸ್ಥಳಾಂತರಿತ ಕೇಂದ್ರ: ಹಂಗಾರಕಟ್ಟೆ ಮೀನು ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದ ಕಾರ್ಖಾನೆಯಾಗಿದ್ದು, ಏಕಾಏಕಿ ಕೋಟ ಪಡುಕರೆ ವ್ಯಾಪ್ತಿಗೆ ಸ್ಥಳಾಂತರಗೊಂಡು ವ್ಯವಹಾರ ಆರಂಭಿಸಿದೆ. ಈ ಮಾಹಿತಿ ಪಡೆದ ಸ್ಥಳೀಯರು ಮೊದಲಿನಿಂದ ವ್ಯವಹರಿಸಿಕೊಂಡ ಕೇಂದ್ರದ ಬಗ್ಗೆ ತಗಾದೆ ನಮ್ಮದಲ್ಲ. ಪರ್ಯಾಯವಾಗಿ ಮೀನು ಕಟ್ಟಿಂಗ್ ಕೇಂದ್ರದಿಂದ ಇಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಘಟಕ ನಡೆಸಲು ಅವಕಾಶ ನೀಡಲಾರೆವು ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಕೋಟತಟ್ಟು ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹಾಗೂ ಪಿಡಿಒ ಜಯರಾಮ ಶೆಟ್ಟಿ, ಸದಸ್ಯೆ ವಿದ್ಯಾ ಸಾಲಿಯಾನ್ ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಖಾಸಗಿ ಸಂಸ್ಕರಣಾ ಘಟಕದ ಮುಖ್ಯಸ್ಥರಿಗೆ ಕೂಡಲೇ ಬಂದ್ ಮಾಡುವಂತೆ ಸೂಚಿದರು. ಕಾರ್ಖಾನೆ ಮುಖ್ಯಸ್ಥರು ಇನ್ನು ಮುಂದೆ ಕಟ್ಟಿಂಗ್ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts