More

    ಸ್ಥಳ ಮಹಜರಿಗೆ ಕರೆದೊಯ್ದಾಗಲೇ ಪೊಲೀಸರ ಮೇಲೆ ಮಚ್ಚು ಬೀಸಿದ ರೌಡಿ!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಕೊಲೆ ಪ್ರಕರಣದ ಆರೋಪಿ ಸೇಠು ಅಲಿಯಾಸ್ ರಾಜರಾಜನ್ ಎಂಬಾತ ಸ್ಥಳ ಮಹಜರಿನ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಮಚ್ಚು ಬೀಸಲು ಬಂದಾಗ, ಆತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಬೆಂಗಳೂರು ಉತ್ತರ ತಾಲೂಕು ಮಾದಾವರ ವ್ಯಾಪ್ತಿಯಲ್ಲಿರುವ ನವಿಲೆ ಬಡಾವಣೆಯಲ್ಲಿ ಈ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಆರೋಪಿ ಸೇಠುವನ್ನು ಪೊಲೀಸರು ಪ್ರಕರಣವೊಂದರ ಸಂಬಂಧ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆಯೇ ಲಾಂಗ್ ಬೀಸಲು ಪ್ರಯತ್ನಿಸಿದ ಎಂಬುದು ಪೊಲೀಸರ ಆರೋಪ. ಆದರೆ ಆತ ಈಗಾಗಲೇ ಪೊಲೀಸರ ವಶದಲ್ಲೇ ಇದ್ದುದರಿಂದ, ಆತನ ಕೈಗೆ ಲಾಂಗ್ ಬರದಂತೆ ಪೊಲೀಸರು ಎಚ್ಚರ ವಹಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.

    ಇದೇ ತಿಂಗಳ 15ರಂದು ರೌಡಿಶೀಟರ್ ನಟರಾಜ ಅಲಿಯಾಸ್ ಮುಳ್ಳ ಎಂಬಾತನನ್ನು ರಾಜರಾಜನ್ ಗ್ಯಾಂಗ್ನವರು ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಸೇಠುನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯಕ್ಕೆ ಬಳಸಿದ್ದ ಲಾಂಗ್ ಅನ್ನು ವಶಕ್ಕೆ ಪಡೆಯಲು ಆರೋಪಿಯೊಂದಿಗೆ ಪೊಲೀಸರು ತೆರಳಿದ್ದರು. ಈ ಸಂದರ್ಭದಲ್ಲಿ ಆ ಸ್ಥಳದಲ್ಲಿ ಸಿಕ್ಕ ಲಾಂಗ್, ಆರೋಪಿಯ ಕೈಗೆ ಹೋಗದಂತೆ ಪೊಲೀಸರು ನೋಡಿಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದ್ದರಿಂದ ಅದೇ ಲಾಂಗ್ ಅನ್ನು ಪೊಲೀಸರ ಮೇಲೆ ರಾಜರಾಜನ್ ಬೀಸಿದ ಎಂದು ಹೇಳಲಾಗುತ್ತಿದೆ. ಇದರಿಂದ ಪೊಲೀಸ್ ಕಾನ್ಸ್‌ಟೇಬಲ್ ಹಾಜಿ ನಾಮ್‌ದಾರ್ ಎಂಬುವವರ ಬಲಗೈಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ರಾಜರಾಜನ್‌ಗೆ ಗುಂಡು ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts