More

    ಸ್ವಾರ್ಥದ ಬದುಕು ಬದುಕಿದ್ದು ಸತ್ತಂತ ಜೀವನ

    ರಾಯಚೂರು: ಸಮಾಜದಲ್ಲಿ ಸ್ವಾರ್ಥಕ್ಕಾಗಿ ಬದುಕುವವರು ಬದುಕಿದ್ದಾಗಲೇ ಸತ್ತಂತೆ. ಬದುಕು ಅನಿಶ್ಚಿತ ಮತ್ತು ಆಕರ್ಷಣೆಗಳು ತಾತ್ಕಾಲಿಕ ಎಂದು ಗೊತ್ತಿದ್ದು ನಾವು ಸ್ವಾರ್ಥಪರರಾಗಿ ಬದುಕುತ್ತಿದ್ದೇವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಕಾರಿ ಡಾ.ಸಿ.ಸೋಮಶೇಖರ ಹೇಳಿದರು.
    ಸ್ಥಳೀಯ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತರರಿಗಾಗಿ ಬದುಕಿದವರ ಜೀವನ ಸಾರ್ಥಕ ಎನಿಸಿಕೊಳ್ಳುವುದರ ಜತೆಗೆ ಇತಿಹಾಸ ಭಾಗವಾಗುತ್ತದೆ ಎಂದರು.
    ಸಮಾಜದಲ್ಲಿನ ಅಸಮಾನತೆ, ಶೋಷಣೆ ಮೆಟ್ಟಿ ನಿಂತು ಹೋರಾಟ ಮಾಡುವವರು ಸಮಾಜವಾಗಿಗಳಾಗಿದ್ದು, ಎಂ.ನಾಗಪ್ಪ ಕೇವಲ ತಮಗಾಗಿ ಬಾಳದೆ ಸಮಾಜಕ್ಕಾಗಿ ಬದುಕಿದ್ದರಿಂದ ಇತಿಹಾಸದ ಭಾಗವಾಗಿದ್ದಾರೆ. ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸದೆ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡಿದ್ದರು. ಒಲಿದು ಬಂದ ಉಪ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರು ಎಂದು ಹೇಳಿದರು.
    ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಂಬೇಡ್ಕರರು ದೇಶಕ್ಕೆ ಸಂವಿಧಾನ ನೀಡಿದರೆ, ಬಸವಾದಿ ಶರಣರು ವಿಶ್ವಕ್ಕೆ ಸಂವಿಧಾನ ನೀಡಿದ ಮಹನೀಯರಾಗಿದ್ದಾರೆ. ಶರಣರ ಚಿಂತನೆಗಳು ಜಾಗತಿಕವಾಗಿ ಸ್ವೀಕೃತವಾಗಿದ್ದು, ಸಂಘಟನೆ, ಸಮಾನತೆ ಅನುಭವ ಮಂಟಪದ ಮೂಲ ಮಂತ್ರವಾಗಿತ್ತು. ಯಾವಾಗಲೂ ಸುವಿಚಾರಗಳನ್ನು ಕೇಳುವುದರ ಜತೆಗೆ ಉತ್ತಮ ಆಲೋಚನೆಗಳನ್ನು ಮಾಡಬೇಕು ಎಂದು ತಿಳಿಸಿದರು.
    ಸಾನ್ನಿಧ್ಯ ವಹಿಸಿದ್ದ ಇಲಕಲ್‌ನ ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಮಾತೃ ಹೃದಯ ಹೊಂದಿದ್ದ ಎಂ.ನಾಗಪ್ಪ ಉತ್ತರ ಭಾರತದಲ್ಲಿದ್ದರೆ ದೊಡ್ಡ ನಾಯಕರಾಗುತ್ತಿದ್ದರು. ಅಲ್ಪ ಸ್ವಲ್ಪ ಕೆಲಸ ಮಾಡಿದವರ ಹೆಸರು ಪಠ್ಯದಲ್ಲಿ ಸೇರಿಸಲಾಗಿದೆ. ಮನೆ ಮಠ ಬಿಟ್ಟು ಹೋರಾಟ ಮಾಡಿದ ನಾಗಪ್ಪರನ್ನು ಇತಿಹಾಸದಲ್ಲಿ ಸೇರಿಸುವ ಕೆಲಸವಾಗಿಲ್ಲ.
    ಇಂದಿಗೂ ಜನ ಅಜ್ಞಾನ, ವೌಢ್ಯದಲ್ಲಿ ಬದುಕುತ್ತಿದ್ದಾರೆ. ಎಲ್ಲರೂ ಕೂಡಿ ದುಡಿದ ಹಂಚಿ ತಿನ್ನುವುದು ಬಸವ ತತ್ತ್ವವಾಗಿದ್ದು, ಬಸವಾದಿ ಶರಣರ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಬದಲು ಎಲ್ಲರೂ ಮುಂದಾಗಬೇಕು ಎಂದರು.
    ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಹಾಗೂ ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರಕುಮಾರ ಶಿವಾಳೆಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲಿಂಗಸುಗೂರಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಬಸಪ್ಪ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಉಪಾಧ್ಯಕ್ಷ ನಾಗರಾಜ ಮಸ್ಕಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts