More

    ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ : ಹೆರೂರ ಕ್ರಾಸ್ ಬಳಿ ಕೊಚ್ಚಿಹೋದ ಸೇತುವೆ ರಸ್ತೆ

    ಬಾಗಲಕೋಟೆ : ಜಿಲ್ಲೆಯ ವಿವಿಧೆಡೆ ಭಾನುವಾರ ತಡರಾತ್ರಿಯಿಂದ ಶುರುವಾದ ವರುಣನ ಅಬ್ಬರ ಸೋಮವಾರವೂ ಮುಂದುವರಿದಿತ್ತು. ಬಾಗಲಕೋಟೆ ತಾಲೂಕು, ಹುನಗುಂದ, ಇಳಕಲ್ಲ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಉಳಿದಂತೆ ಕೆಲ ಭಾಗದಲ್ಲಿ ಜಿಟಿಜಿಟಿ ಮಳೆ ಆಗಿದೆ.

    ಸೋಮವಾರ ಬೆಳಗ್ಗೆಯೂ ಜಿಟಿಜಿಟಿ ಮಳೆ ಮುಂದುವರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಯಿತು. ಬೆಳಗ್ಗೆ ಕೆಲಸಕ್ಕೆ ತೆರಳಲು ಜನರು ತೊಂದರೆ ಅನುಭವಿಸಿದರು.
    ಜಿಲ್ಲಾದ್ಯಂತ ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗಿನ ಅವಧಿವರೆಗೆ 11.9 ಎಂಎಂ ಮಳೆ ಆಗಿದೆ. ಬಾಗಲಕೋಟೆ ತಾಲೂಕಿನ ರಾಂಪುರ ಭಾಗದಲ್ಲಿ ಗರಿಷ್ಠ 84 ಎಂಎಂ ಮಳೆ ಸುರಿದಿದೆ. ಬೇವೂರಲ್ಲಿ 64 ಎಂಎಂ ಹಾಗೂ ಇಳಕಲ್ಲ ತಾಲೂಕಿನ ಕರಡಿ ಗ್ರಾಮ ವ್ಯಾಪ್ತಿಯಲ್ಲಿ 70 ಎಂಎಂ ಮಳೆ ದಾಖಲಾಗಿದೆ.

    ಇಳಕಲ್ಲ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹೆರೂರ ಕ್ರಾಸ್ ಬಳಿಯ ಹಿರೇಹಳ್ಳ ತುಂಬಿ ಹರಿದು ಸೇತುವೆ, ರಸ್ತೆ ಕೊಚ್ಚಿಕೊಂಡು ಹೋಗಿವೆ. ಸಂಚಾರಕ್ಕೆ ತೊಂದರೆ ಆಗಿದೆ.
    ಬಾಗಲಕೋಟೆ, ಇಳಕಲ್ಲ ನಗರ, ಹುನಗುಂದ, ಕಮತಗಿ ಪಟ್ಟಣದಲ್ಲಿ ಸೋಮವಾರ ಕೂಡ ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ಇನ್ನು ಜಮಖಂಡಿಯಲ್ಲಿ ಸಂಜೆ ಮೋಡಕವಿದ ವಾತಾವರಣ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts