More

    ಲಿಟಲ್ ಸ್ಕಾಲರ್ ಅಕಾಡೆಮಿ ಚಾಂಪಿಯನ್

    ಬೆಳಗಾವಿ: ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಮಾಜಿ ಸಂಸದ ಎಸ್.ಬಿ. ಸಿದ್ನಾಳ ಹೇಳಿದ್ದಾರೆ.
    ರಾಮತೀರ್ಥ ನಗರದ ಉದಯ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ 25ನೇ ವರ್ಷಾಚರಣೆ ನಿಮಿತ್ತ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ್ ಶಾಲಾ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಸದೃಢ ಆರೋಗ್ಯ ಹೊಂದಲು ಸಾಧ್ಯ ಎಂದರು.

    ಸೌಲಭ್ಯಗಳಿಲ್ಲದ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚಿಮಣಿ ಬೆಳಕಿನಲ್ಲಿ ಓದಿ ಉನ್ನತ ಹುದ್ದೆಗೇರಿದ ಹಲವು ಮೇಧಾವಿಗಳ ಉದಾಹಣೆಗಳಿವೆ. ಪ್ರಸ್ತುತ ಶೈಕ್ಷಣಿಕವಾಗಿ ಎಲ್ಲ ಸೌಲಭ್ಯಗಳು ಲಭ್ಯವಿದ್ದರೂ ಶಿಕ್ಷಣ ಕಲಿಯುವ ಆಸಕ್ತಿ ಕಡಿಮೆ ಆಗುತ್ತಿದೆ. ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ. ಹಾಗಾಗಿ ವಿದ್ಯಾರ್ಥಿಗಳು ಸಮಯ ಹಾಳು ಮಾಡದೇ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಾಗಬೇಕು. ಐಎಎಸ್ ಅಧಿಕಾರಿಗಳಾಗುವ ಕನಸು ಕಾಣಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದರು. ಮಲ್ಲಿಕಾರ್ಜುನ ಮಾಲಿ, ಸಾಹಿತಿ ವೈ.ಆರ್. ಪಾಟೀಲ, ದಿಗ್ವಿಜಯ ಸಿದ್ನಾಳ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಇತರ ಗಣ್ಯರು ಉಪಸ್ಥಿತರಿದ್ದರು.

    ವಿಜೇತರಿಗೆ ಬಹುಮಾನ ವಿತರಣೆ

    ಕಣಬರಗಿ ರಸ್ತೆಯ ಲಿಟಲ್ ಸ್ಕಾಲರ್ ಅಕಾಡೆಮಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಹಾಂತೇಶ ನಗರದ ಜೀವನ ಜ್ಯೋತಿ ಹೈಸ್ಕೂಲ್ ರನ್ನರ್‌ಅಪ್ ಸ್ಥಾನ ಪಡೆಯಿತು. ಐಕ್ಯೂ ಟೆಸ್ಟ್‌ನಲ್ಲಿ ಎಂ.ವಿ.ಎಂ. ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ದಿವ್ಯಾ ಪಾಟೀಲ ಪ್ರಥಮ, ಮೈಮ್ ಎಮೋಟ್ ಸ್ಪರ್ಧೆಯಲ್ಲಿ ಲಿಟಲ್ ಸ್ಕಾಲರ್ ಅಕಾಡೆಮಿಯ ರೋಹನ ಯದ್ವಾರ್ಡ್ ತಂಡ, ಫೈಯರ್‌ಲೆಸ್ ಕುಕ್ಕಿಂಗ್‌ನಲ್ಲಿ ಜ್ಯೋತಿ ಸೆಂಟ್ರಲ್ ಸ್ಕೂಲ್‌ನ ಅಂಜಲಿ ಖಟಾವ್ಕರ್, ವೈಷ್ಣವಿ ಹೊಂಗೇಕರ ಪ್ರಥಮ ಸ್ಥಾನದ ಪಡೆದರು. ವೇಷಭೂಷಣದಲ್ಲಿ ಲಿಟಲ್ ಸ್ಕಾಲರ್ ಅಕಾಡೆಮಿ ಹರ್ಷಶದಾ ಉಳ್ಳೇಗಡ್ಡಿ, ಪೇಂಟಿಂಗ್‌ನಲ್ಲಿ ಸಂಜಯ ಗೋಡಾವಥ ಇಂಟರ್‌ನ್ಯಾಷನಲ್ ಸ್ಕೂಲ್‌ನ ವೇದಾಂತ ನಾಥಬುವಾ, ಆದಿತ್ಯಾ ಕೊಲ್ಹಾಪುರ ಪ್ರಥಮ ಸ್ಥಾನ ಪಡೆದರು. ಇನ್ನೂ ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts