More

    ಸಾಹಿತ್ಯ ಆರೋಗ್ಯಕರ ಚಿಂತನೆ ಒಳಗೊಳ್ಳಲಿ

    ಶಹಾಪುರ: ಸಾಹಿತ್ಯದಲ್ಲಿ ಆರೋಗ್ಯಕರ ಚಿಂತನೆ, ಸಾರ್ವಕಾಲಿಕ ಮೌಲ್ಯಗಳಿರಬೇಕು ಎಂದು ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಹೇಳಿದರು.

    ನಗರದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ಸಾಹಿತಿಗಳ ಸಾಹಿತ್ಯದೊಂದಿಗೆ ವಿದ್ಯಾಥರ್ಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರವಾಸ ಸಾಹಿತ್ಯ ಕುರಿತು ಮಾತನಾಡಿದ ಅವರು, ಸಾಹಿತ್ಯ ಓದುಗರ ಮನಸ್ಸು, ಬುದ್ಧಿ ಹಾಗೂ ಭಾವಗಳನ್ನು ಉದ್ಧೀಪನಗೊಳಿಸಿ ಸಮಷ್ಟಿ ಬೆಳವಣಿಗೆಗೆ ಕಾರಣವಾಗಬೇಕು. ಜಾತಿ, ಮತ, ಪಂಥ, ಭಾಷೆ ಎಲ್ಲವನ್ನು ಮೀರಿ ಸಂಸ್ಕೃತಿ ಪರಂಪರೆ ಸಂಸ್ಕಾರ ಒದಗಿಸುವಲ್ಲಿ ಸಾಹಿತ್ಯದ ಹಿರಿಮೆ ಅಡಗಿದೆ ಎಂದರು.

    ಸಾಹಿತ್ಯದ ಪ್ರತಿಯೊಂದು ಪ್ರಕಾರ ತನ್ನದೇ ಆದ ವೈಶಿಷ್ಟೃವನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸ ಕಥನ ಸಾಹಿತ್ಯವೂ ಹೊರತಾಗಿಲ್ಲ. ಸಾಹಿತ್ಯದ ಪ್ರಮುಖ ಪ್ರಕಾರವಾಗಿ ಪ್ರವಾಸ ಸಾಹಿತ್ಯ ಬೆಳೆಯುತ್ತಿದೆ. ಒಂದು ಪ್ರದೇಶದ ಸಾಂಸ್ಕೃತಿಕ ಪರಿಸರ, ಬೌದ್ಧಿಕ ಪರಂಪರೆ, ಜೀವನಶೈಲಿ, ಪದ್ಧತಿ, ಆಚರಣೆ, ಪ್ರಾಕೃತಿಕ ಪರಿಸರ, ಇತಿಹಾಸ, ಭಾಷಾಭಿಮಾನ ತಿಳಿದುಕೊಳ್ಳಲು ತುಂಬ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವಿದ್ಯಾಥರ್ಿಗಳಾದ ಆಶಾರಾಣಿ, ಪ್ರೇಮಸಾಗರ, ಸೈಯದ್ ಮೊದಲಾದವರು ಪ್ರವಾಸ ಸಾಹಿತ್ಯ ಬಗ್ಗೆ ಹೊನ್ಕಲ್ ಜತೆ ಸಂವಾದ ನಡೆಸಿ ತಿಳಿದುಕೊಂಡರು. ಉಪನ್ಯಾಸಕಿ ಡಾ.ಶೈಲಜಾ ಬಾಗೇವಾಡಿ, ರಾಘವೇಂದ್ರ ಹಾರಣಗೇರಾ, ಆನಂದಕುಮಾರ ಸಾಸನೂರ, ಡಾ.ಪಿ.ಕೆ. ಕುಲಕಣರ್ಿ, ಹಣಮಂತಿ ಗುತ್ತೇದಾರ್, ಡಾ.ಚಂದ್ರಶೇಖರ ಹದ್ಯೆಗೋಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts