More

    ಶಾಲಾ ಪ್ರಾಂಶುಪಾಲರ ಕೊಠಡಿಯಲ್ಲಿ ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್‌ಗಳು ಪತ್ತೆ!

    ಮಧ್ಯಪ್ರದೇಶ: ಮೊರೆನಾದ ಹೆಸರಾಂತ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಮತ್ತು ಸಾಮಗ್ರಿಗಳು ಬೆಳಕಿಗೆ ಬಂದಿವೆ. ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಸದಸ್ಯರೊಬ್ಬರು ತಪಾಸಣೆ ನಡೆಸಿದಾಗ, ಗ್ರಂಥಾಲಯದ ಪಕ್ಕದ ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಮತ್ತು ಕಾಂಡೋಮ್‌ಗಳ ಪ್ಯಾಕೆಟ್‌ಗಳು ಕಂಡುಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ನಡುವಿನ ಪ್ರಮುಖ ವ್ಯತ್ಯಾಸವೇನು ಗೊತ್ತಾ?
    ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ, ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎ ಕೆ ಪಾಠಕ್ ಅವರೊಂದಿಗೆ ಸಾಮಾನ್ಯ ತಪಾಸಣೆಗಾಗಿ ಮೊರೆನಾ ಜಿಲ್ಲೆಯ ಖಾಸಗಿ ಶಾಲೆಗೆ ಭೇಟಿ ನೀಡಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಮತ್ತು ಕಾಂಡೋಮ್ ಪತ್ತೆಯಾಗಿದ್ದವು. ಆಕ್ಷೇಪಾರ್ಹ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ಸೀಲ್‌ ಹಾಕಲಾಗಿದೆ.

     ಇದನ್ನೂ ಓದಿ: ಶ್ರೀಲಂಕಾದಿಂದ ತಂದು ನೆಟ್ಟʻಮರʼಕ್ಕಿದೆ ಹೈ ಸೆಕ್ಯುರಿಟಿ; ಈ ವೃಕ್ಷದ ಇತಿಹಾಸ ಗೊತ್ತಾ?
    “ಶಾಲಾ ಆವರಣದಲ್ಲಿ ಮದ್ಯಕ್ಕೆ ಅವಕಾಶವಿಲ್ಲ. ಇದು ಕಾನೂನು ಉಲ್ಲಂಘನೆಯಾಗಿದೆ. ಇಷ್ಟೊಂದು ಪ್ರಮಾಣದ ಮದ್ಯವನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರವಾಗಿರುವುದರಿಂದ ಈ ಬಗ್ಗೆ ಇಲಾಖೆ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ” ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ ಹೇಳಿದ್ದಾರೆ.

    ಪ್ರಾಂಶುಪಾಲರು ಮತ್ತು ಶಾಲಾ ವ್ಯವಸ್ಥಾಪಕರ ಕೊಠಡಿಗಳು ಮಕ್ಕಳ ತರಗತಿಗಳಿಗೆ ಜೋಡಿಸಲ್ಪಟ್ಟಿರುವುದಕ್ಕೆ ತನಿಖಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಮತ್ತು ಮದ್ಯದ ಬಾಟಲಿಗಳು ಸೇರಿದಂತೆ ಇತರ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರೋದ್ರಿಂದ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಶಾಲೆಯ ಗ್ರಂಥಾಲಯದಲ್ಲಿ ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡುವ ಪುಸ್ತಕವೊಂದು ಕಂಡು ಬಂದಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದು, ಅಬಕಾರಿ ಇಲಾಖೆ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದೆ.

     ಇದನ್ನೂ ಓದಿ: BJP ಅಭ್ಯರ್ಥಿಗೆ ಸೇರಿದ 3 ಕೋಟಿ ಮೊತ್ತದ ಕುಕ್ಕರ್,ಗಡಿಯಾರ,ಪಾತ್ರೆಗಳು GST ಅಧಿಕಾರಿಗಳ ವಶಕ್ಕೆ
    ಶಾಲೆಯ ಪ್ರಾಂಶುಪಾಲರು ಆರೋಪವನ್ನು ತಳ್ಳಿಹಾಕಿದ್ದಾರೆ. ವಸತಿ ಪ್ರದೇಶವು ಕ್ಯಾಂಪಸ್‌ನಿಂದ ಹೊರಗಿದೆ. ಖಾಲಿ ಬಾಟಲಿಗಳು ಮತ್ತು ಎರಡು ಬಾಟಲಿಗಳಲ್ಲಿ ಮದ್ಯ ತುಂಬಿರಬಹುದು. ನಾವು ಮದ್ಯ ಸೇವಿಸುವ ಜನರಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಸರಿಯಾದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳು ಪೊಲೀಸ್​ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts