More

    ಲಿಯೋನೆಲ್​ ಮೆಸ್ಸಿ 700 ಗೋಲುಗಳ ಸರದಾರ, ಯಾರ ದಾಖಲೆ ಮುರಿದರು ಗೊತ್ತೇ?

    ಬಾರ್ಸಿಲೋನಾ​: ದಾಖಲೆಯ ಆರು ಬಾರಿ ಬ್ಯಾಲನ್​ ಡಿ ಓರ್​ ಪ್ರಶಸ್ತಿಗೆ ಭಾಜನರಾಗಿರುವ ಫುಟ್​ಬಾಲ್​ ತಾರೆ ಲಿಯೋನೆಲ್​ ಮೆಸ್ಸಿ ವೃತ್ತಿಜೀವನದಲ್ಲಿ 700 ಗೋಲು ಸಿಡಿಸಿದ ಸಾಧನೆ ಮಾಡಿದ್ದಾರೆ. ಅರ್ಜೆಂಟೀನಾ ಮತ್ತು ಬಾರ್ಸಿಲೋನಾ​ ಪರ ಆಡುವ ವೇಳೆ ಮೆಸ್ಸಿ ಈ ಗೋಲುಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಪೋರ್ಚುಗಲ್​ ಫುಟ್​ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊಗಿಂತ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ.

    ಇದನ್ನೂ ಓದಿ: ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?

    ಅಥ್ಲೆಟಿಕೊ ಮ್ಯಾಡ್ರಿಡ್​ ವಿರುದ್ಧ ಬುಧವಾರ ನಡೆದ ಲಾ ಲೀಗಾ ಟೂರ್ನಿಯ ಪಂದ್ಯದ ವೇಳೆ ಮೆಸ್ಸಿ 700ನೇ ಗೋಲು ಬಾರಿಸಿದ್ದಾರೆ. ಈ ಮೂಲಕ ಬಾರ್ಸಿಲೋನಾ ತಂಡ ಪಂದ್ಯದಲ್ಲಿ 2-2 ಗೋಲುಗಳಿಂದ ಡ್ರಾ ಸಾಧಿಸಿತು. ಅಥ್ಲೆಟಿಕೊ ಮ್ಯಾಡ್ರಿಡ್​ ಜತೆಗೆ ಅಂಕ ಹಂಚಿಕೊಂಡ ಕಾರಣ ಬಾರ್ಸಿಲೋನಾ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ರಿಯಲ್​ ಮ್ಯಾಡ್ರಿಡ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ವಿಫಲವಾಗಿದೆ. ಬಾರ್ಸಿಲೋನಾ ಈಗ 70 ಅಂಕ ಗಳಿಸಿದ್ದರೆ, ರಿಯಲ್​ ಮ್ಯಾಡ್ರಿಡ್​ 1 ಅಂಕದಿಂದ ಮುಂದಿದೆ. ಲಾಕ್​ಡೌನ್​ ನಂತರ ಫುಟ್​ಬಾಲ್​ ಚಟುವಟಿಕೆ ಪುನರಾರಂಭಗೊಂಡ ಕಳೆದ 3 ಪಂದ್ಯಗಳಲ್ಲಿ ಮೆಸ್ಸಿ ಒಂದೂ ಗೋಲು ಬಾರಿಸಲು ವಿಫಲರಾಗಿದ್ದರು.

    ಇದನ್ನೂ ಓದಿ: ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ವಾರ್ನರ್​ ಕಾಲೆಳೆದ ಅಶ್ವಿನ್​!

    2005ರ ಮೇ 1ರಂದು ವೃತ್ತಿಜೀವನದ ಮೊದಲ ಗೋಲು ಬಾರಿಸಿದ್ದ ಮೆಸ್ಸಿ, ತಾನಾಡಿದ 861ನೇ ಪಂದ್ಯದಲ್ಲಿ 700ನೇ ಗೋಲು ಬಾರಿಸಿದ್ದಾರೆ. ಈ ಪೈಕಿ 630 ಗೋಲುಗಳನ್ನು ಬಾರ್ಸಿಲೋನಾ ಪರ 723 ಪಂದ್ಯಗಳಲ್ಲಿ ಮತ್ತು 70 ಗೋಲುಗಳನ್ನು ಅರ್ಜೆಂಟೀನಾ ಪರ 138 ಪಂದ್ಯಗಳಲ್ಲಿ ಬಾರಿಸಿದ್ದಾರೆ. ರಿಯಲ್​ ಮ್ಯಾಡ್ರಿಡ್​ ಮಾಜಿ ಆಟಗಾರ ರೊನಾಲ್ಡೊ 700 ಗೋಲುಗಳನ್ನು ಬಾರಿಸಲು 33 ವರ್ಷದ ಮೆಸ್ಸಿಗಿಂತ 112 ಅಧಿಕ ಪಂದ್ಯಗಳನ್ನು ಆಡಿದ್ದರು. ಅಂದರೆ ಜುವೆಂಟಸ್​ ತಾರೆ ರೊನಾಲ್ಡೊ 973ನೇ ಪಂದ್ಯದಲ್ಲಿ 700 ಗೋಲು ಬಾರಿಸಿದ್ದರು. 35 ವರ್ಷದ ರೊನಾಲ್ಡೊ 2019ರ ಅಕ್ಟೋಬರ್​ನಲ್ಲೇ ಈ ಸಾಧನೆ ಮಾಡಿದ್ದರು. ರೊನಾಲ್ಡೊ, ಮೆಸ್ಸಿ ಹೊರತಾಗಿ ಬೇರೆ ಯಾವ ಹಾಲಿ ಆಟಗಾರರೂ 700 ಗೋಲು ಸಿಡಿಸಿದ ಸಾಧನೆ ಮಾಡಿಲ್ಲ.

    700ಕ್ಕಿಂತ ಅಧಿಕ ಗೋಲು ಸಿಡಿಸಿದ ಫುಟ್​ಬಾಲ್ ಆಟಗಾರರು:
    ಪೀಲೆ (ಬ್ರೆಜಿಲ್​): 1279 ಗೋಲು
    ಜೋಸೆಫ್​ ಬಿಕಾನ್ (ಆಸ್ಟ್ರಿಯಾ): 805 ಗೋಲು
    ರೊಮಾರಿಯೋ (ಬ್ರೆಜಿಲ್​): 772 ಗೋಲು
    ಫೆರೆಂಕ್​ ಪುಸ್ಕಾಸ್​ (ಹಂಗೆರಿ): 746 ಗೋಲು
    ಗೆರ್ಡ್​ ಮುಲ್ಲರ್​ (ಜರ್ಮನಿ): 735 ಗೋಲು
    ಕ್ರಿಶ್ಚಿಯಾನೊ ರೊನಾಲ್ಡೊ (ಪೋರ್ಚುಗಲ್​): 728
    ಲಿಯೋನೆಲ್​ ಮೆಸ್ಸಿ (ಅರ್ಜೆಂಟೀನಾ): 700

    PHOTOS | ಭಾರತದ ಕ್ರೀಡಾ ದಂಪತಿ ಸಾಲಿಗೆ ದೀಪಿಕಾ-ಅತನು, ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts