More

    ಕನ್ನಡಾಭಿಮಾನವೆಂದರೆ ಇತರೆ ಭಾಷೆ ದ್ವೇಷಿಸುವುದಲ್ಲ

    ದಾವಣಗೆರೆ: ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರೆ ಭಾಷೆಗಳನ್ನು ದ್ವೇಷಿಸಬೇಕೆಂಬ ಕಲ್ಪನೆ ಸರಿಯಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

    ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಭಾಷಾವಾರು ಪ್ರಾಂತ್ಯ ರಚನೆಯಾಗಿದೆ. ಆಯಾ ರಾಜ್ಯದ ರಾಜ್ಯಭಾಷೆಯು ಈ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಶಿಕ್ಷಣ ಕ್ಷೇತ್ರದಲ್ಲೂ ರಾಜ್ಯಭಾಷೆಯೆ ಸಾರ್ವಭೌಮ ಭಾಷೆಯೆ ಹೊರತು ಅನ್ಯ ಭಾಷೆಯಲ್ಲ ಎಂದು ಪ್ರತಿಪಾದಿಸಿದರು.

    ಕರೊನಾ ಮಹಾಮಾರಿ ಹಿಮ್ಮೆಟ್ಟಿಸುವತ್ತ ಜಿಲ್ಲಾಡಳಿತ ಶ್ರಮಿಸುತ್ತಿದೆ. ಈ ವೈರಸ್ ನಿಯಂತ್ರಣೆಗೆ ಸಾರ್ವಜನಿಕರು ಕಟಿಬದ್ಧರಾಗಬೇಕು. ದೈಹಿಕ ಅಂತರ, ಸ್ಯಾನಿಟೈಸರ್-ಮಾಸ್ಕ್ ಬಳಕೆಗೆ ಗಮನ ನೀಡಬೇಕಿದೆ. ಚಳಿಗಾಲದಲ್ಲಿ ಕರೊನಾ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇದ್ದು ಯಾರೂ ಸಹ ಮೈಮರೆಯಬಾರದು ಎಂದು ಕಿವಿಮಾತು ಹೇಳಿದರು.

    ಕರೊನಾ ಕಾರಣಕ್ಕೆ ಸಾರ್ವಜನಿಕರು, ಶಾಲಾ ಮಕ್ಕಳು ಭಾಗವಹಿಸಲಿಲ್ಲ. ಮೆರವಣಿಗೆಯೂ ಇರಲಿಲ್ಲ. ಆರಂಭದಲ್ಲಿ ನಗರಪಾಲಿಕೆ ಆವರಣದಲ್ಲಿ ಕನ್ನಡ ಭುವನೇಶ್ವರಿ ದೇವಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಮೇಯರ್ ಬಿ.ಜಿ.ಅಜಯಕುಮಾರ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts