More

    ಲಿಂಗಾಯತ ಧರ್ಮಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗುವವರೆಗೆ ಹೋರಾಟ

    ಚನ್ನಗಿರಿ: ಲಿಂಗಾಯತ ಧರ್ಮಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗುವವರೆಗೆ ಹೋರಾಟಕ್ಕೆ ಎಲ್ಲ್ಲರೂ ಕಂಕಣಬದ್ಧರಾಗಿರಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.

    ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

    ಲಿಂಗಾಯತ ಧರ್ಮದ ಪ್ರಚಾರ ಮತ್ತು ಧರ್ಮದ ಅಸ್ತಿತ್ವ ಉಳಿಸಿಕೊಳ್ಳಲು ಸುಭದ್ರ ವ್ಯವಸ್ಥೆ ನಡುವೆ ಬೆಳೆಯಬೇಕು, ಇಷ್ಟಲಿಂಗಕ್ಕೆ ಮಹತ್ವ ನೀಡಿದರೆ ಮಾತ್ರ ನಮ್ಮ ಸಂಸ್ಕೃತಿಗೆ ಗೌರವ ನೀಡಿದಂತೆ.

    ಇದಕ್ಕೆ ಬಸವಣ್ಣನ ಮಾರ್ಗದರ್ಶನದಂತೆ ಶ್ರಮ(ಕಾರ್ಮಿಕ) ಸಂಸ್ಕೃತಿಯಲ್ಲಿ ನಾವು ಸಾಗಬೇಕಿದೆ. ಮನೆಯಲ್ಲಿ ಕುಳಿತು ರಾಷ್ಟ್ರೀಯ ಸ್ಥಾನಮಾನ ಸಿಗುತ್ತದೆ ಎಂದರೆ ಅದು ಅಸಾಧ್ಯ. ನಾವೆಲ್ಲರೂ ಒಂದಾಗಿ ಹೋರಾಟ ಮಾಡುವ ಮೂಲಕ ಸ್ಥಾನಮಾನ ಪಡೆಯಬೇಕಿದೆ ಎಂದರು.

    12ನೇ ಶತಮಾನದಲ್ಲಿ ದಾಸೋಹ ಕಾಯಕಕ್ಕೆ ಬಸವಣ್ಣನವರು ಮಹತ್ವ ನೀಡಿದರು. ಲಿಂಗಾಯತ ಧರ್ಮದಲ್ಲಿ ನಾವು ಬದ್ಧತೆಯಿಂದ ಜೀವನ ಮಾಡಿ ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನೆಲೆ ಕಂಡುಕೊಂಡಿದ್ದೇವೆ ಎಂದರು.

    ಗ್ರಾಮಾಭಿವೃದ್ಧ್ದಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಮಾತನಾಡಿ, ದಾಸೋಹ ಕಾಯಕ ಎಂಬುದು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ಸಮಗರ ಹರಳಯ್ಯ ಇನ್ನೂ ಹಲವು ಶರಣರು ಕಾಯಕದ ಮೂಲಕ ಬಂದು ಸಾತ್ವಿಕ ಸಮಾಜ ನಿರ್ಮಾಣ ಮಾಡಿದರು ಎಂದು ವಿವರಿಸಿದರು.

    ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್, ಕಾರ್ಯದರ್ಶಿ ಮರುಳಸಿದ್ದಯ್ಯ, ರಾಜ್ಯ ಕಾರ್ಯದರ್ಶಿ ಅಗಡಿ ಮಹಾಂತೇಶ್, ತಾಲೂಕು ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಜಿ.ಎಸ್. ಶಿವಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ಕಾಂಗ್ರೆಸ್ ಮುಖಂಡ ವಡ್ನಾಳ್ ಜಗದೀಶ್, ಟಿ.ವಿ. ಚಂದ್ರಪ್ಪ, ಮಸಣಿಕೆರೆ ನಟರಾಜ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts