More

    ಸುಸ್ಥಿರ ಗಣಿಗಾರಿಕೆಗೆ ಗಮನಹರಿಸಲು ಕ್ವಾರಿ ಮಾಲೀಕರಿಗೆ ಎಸಿ ರಾಜಶೇಖರ ಡಂಬಳ ಸೂಚನೆ

    ಲಿಂಗಸುಗೂರು: ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಹಲವೆಡೆ ಗಣಿಗಾರಿಕೆಗಳಲ್ಲಿ ನಡೆದ ಸ್ಫೋಟದಿಂದ ಜೀವಹಾನಿಯಾಗಿದೆ. ಇದನ್ನು ಮರುಕಳಿಸದಂತೆ ಮುನ್ನೆಚ್ಚರಿಕೆಯಾಗಿ ಸರ್ಕಾರ ಕ್ರಮಕೈಗೊಂಡಿದ್ದು, ತಾಲೂಕಿನಲ್ಲಿ ಸುಸ್ಥಿರ ಗಣಿಗಾರಿಕೆಗೆ ಗಮನಹರಿಸುವ ಮೂಲಕ ಜೀವಹಾನಿಯಾಗದಂತೆ ಗಮನ ಹರಿಸಬೇಕೆಂದು ಎಸಿ ರಾಜಶೇಖರ ಡಂಬಳ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮತ್ತು ಗಣಿ ಮಾಲೀಕರ ಸಭೆಯಲ್ಲಿ ಮಾತನಾಡಿದರು. ಲಿಂಗಸುಗೂರು ಮತ್ತು ಮಸ್ಕಿ ಸೇರಿ ಏಳು ಕಡೆ ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಡಿಜೆಎಂಎಸ್‌ನಿಂದ ಪರವಾನಗಿ ಪಡೆಯದ ಕ್ವಾರಿಗಳನ್ನು ಸ್ಥಗಿತಗೊಳಿಸಲಾಗುವುದು. ಸ್ಫೋಟಕ ವಸ್ತುಗಳ ಬಳಕೆ ವೇಳೆ ಇಲಾಖೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಗಣಿಗಾರಿಕೆಯಲ್ಲಿ ಸ್ಫೋಟದ ವೇಳೆ ಯಾವುದೇ ಅವಘಡಗಳು ಸಂಭವಿಸಿದರೆ ಗಣಿ ಮಾಲೀಕರೆ ಹೊಣೆಯಾಗಬೇಕಿದ್ದು, ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ಮಾತನಾಡಿ, ಸ್ಫೋಟಕ ಸರಬರಾಜುದಾರರಿಂದ ಅಧಿಕೃತವಾಗಿ ಸ್ಫೋಟಕಗಳನ್ನು ಪಡೆಯಬೇಕು. ಮೈನ್ ಪೋರ್ಮನ್ ಅಥವಾ ಮೈನಾಮೆಟ್ ಬ್ಲಾಸ್ಟರ್ ವ್ಯಕ್ತಿಗಳು ಮಾತ್ರ ಸ್ಫೋಟಕ ಬಳಸಬೇಕು. ಸ್ಫೋಟಕ ಸರಬರಾಜು ವಾಹನದಲ್ಲಿ ಪ್ರತ್ಯೇಕ ವಿಭಾಗ ಇರಬೇಕು. ವಾಹನ ಸ್ಫೋಟಕ ನಿಯಂತ್ರಣಾಧಿಕಾರಿ ಅಥವಾ ಡಿಜಿಎಂಎಸ್‌ನಿಂದ ಪರವಾನಗಿ ಪಡೆದಿರಬೇಕು ಎಂದು ತಿಳಿಸಿದರು.

    ಸ್ಫೋಟಕ ವೇಳೆ ಅಂತರ ಕಾಯ್ದುಕೊಳ್ಳಬೇಕು. ಹಸಿರು ಶಂಕು ಗುರುತಿನ ಸೂಚನಾ ಫಲಕವಿರಬೇಕು. ಸ್ಫೋಟಕ ನಿರ್ವಾಹಕ ಮಧ್ಯಪಾನ, ತಂಬಾಕು, ಬಂದೂಕು ಹೊಂದಿರಬಾರದು. ಸ್ಫೋಟಕ ಸ್ಥಳದಲ್ಲಿ ಸೈರನ್ ಅಳವಡಿಸಬೇಕೆಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts