More

    ವಿದ್ಯುತ್ ಕಂಬಗಳಿಂದ ಸಂಚಾರಕ್ಕೆಅಡ್ಡಿ; ತೆರವಿಗೆ ಆಗ್ರಹಿಸಿ ಪ್ರತಿಭಟನೆ

    ಲಿಂಗಸುಗೂರು: ತಾಲೂಕಿನ ಕೆಲವು ಗ್ರಾಮಗಳ ರಸ್ತೆ ಬದಿಯಲ್ಲಿ ಹಾಕಲಾದ ವಿದ್ಯುತ್ ಪರಿವರ್ತಕ ಮತ್ತು ಕಂಬಗಳಿಂದ ಸಂಚಾರಕ್ಕೆ ತುಂಬಾ ಅಡ್ಡಿ ಉಂಟು ಮಾಡಿದ್ದು,

    ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಕೆಪಿಆರ್‌ಎಸ್ ಹಾಗೂ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಇದನ್ನೂ ಓದಿರಿ: ರೈತರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಪ್ರತಿಭಟನೆ

    ಹಟ್ಟಿಯಿಂದ ಕಡ್ಡೋಣ, ತವಗ ಮಾರ್ಗವಾಗಿ ಹಾದುಹೋದ ರಸ್ತೆಯಲ್ಲಿ ಬೆಳೆದ ಜಾಲಿ ಗಿಡಗಳು ಮತ್ತು ವಿದ್ಯುತ್ ಕಂಬಳನ್ನು ತೆರವುಗೊಳಿಸಬೇಕು. ತವಗ-ರೋಡಲಬಂಡಾ ರಸ್ತೆ ಕಾಮಗಾರಿ ಆರಂಭಿಸಬೇಕು.

    ಶಾಲಾ-ಕಾಲೇಜು ಸಮಯಕ್ಕೆ ಸಾರಿಗೆ ಬಸ್ ಬಿಡಬೇಕು. ತವಗ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ಶೌಚಾಲಯ ನಿರ್ಮಾಣ ಹಾಗೂ ಶಾಲಾ ಕೊಠಡಿ ದುರಸ್ತಿಗೊಳಿಸಬೇಕು.

    ರೋಡಲಬಂಡಾ ಗ್ರಾಪಂ ವ್ಯಾಪ್ತಿಯಲ್ಲಿ ಉ.ಖಾ ಸಮರ್ಪಕ ಜಾರಿಯಾಗಬೇಕು. ಜೆಜೆಎಂ ಕಾಮಗಾರಿ ಸರಿಪಡಿಸಬೇಕೆಂದು ಒತ್ತಾಯಿಸಿದರು.

    ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಗ್ರಾಪಂ ಉಪಾಧ್ಯಕ್ಷ ಸಿದ್ದಣ್ಣ, ಮುಖಂಡರಾದ ಪವನ್ ಕಮದಾಳ, ಶಂಕರ್, ಶಿವಕುಮಾರ ಪಲ್ಲೇದ, ಬಸವರಾಜ ಹೆಡ್ಡಳ್ಳಿ, ಮುತ್ತಣ್ಣ ಕಂಬಳಿ, ರಂಗಪ್ಪ ದೊರೆ, ದುರುಗಪ್ಪ ಪಾಟೀಲ್, ದಾವಲಸಾಬ, ಲಿಂಗಪ್ಪ ಅಲ್ಲಾಭಕ್ಷಿ, ಮಹ್ಮದ್ ಅನೀಫ್, ಬಾಬಾಜಾನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts