More

    ಕಂದಾಯ ಅದಾಲತ್​ನಲ್ಲಿ 106 ಮಂದಿಗೆ ಸ್ಥಳದಲ್ಲೇ ಹಕ್ಕು ಪತ್ರ ವಿತರಣೆ

    ಲಿಂಗದಹಳ್ಳಿ: ನಾಡ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್​ನಲ್ಲಿ ಸ್ಥಳದಲ್ಲೇ 106 ಮಂದಿಗೆ ಹಕ್ಕುಪತ್ರ, ವಿವಿಧ ವೇತನ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

    76 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, 18 ಮಂದಿಗೆ ಸಂಧ್ಯಾ ಸುರಕ್ಷಾ ವೇತನ, 8 ಮಂದಿಗೆ ವಿಧವಾ ವೇತನ, 6 ಮಂದಿಗೆ ಅಂಗ ವಿಕಲ ವೇತನಗಳ ಮಂಜೂರಾತಿ ದಾಖಲೆ ಪತ್ರಗಳನ್ನು ವಿತರಿಸಲಾಯಿತು. ಅದಾಲತ್​ನಲ್ಲಿ 40ಕ್ಕೂ ಅಧಿಕ ಅರ್ಜಿಗಳು ಸ್ವೀಕರಿಸಲಾಯಿತು.

    ನಂದಿ ಗ್ರಾಮದ ಸರ್ವೆ ನಂ.91 ರಲ್ಲಿ ಇರುವ 161 ಎಕರೆ ಸರ್ಕಾರಿ ಬೀಳು ಭೂಮಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡವರು ದಾಖಲೆ ಪತ್ರ ಪಡೆದು ವಿವಿಧ ಬ್ಯಾಂಕ್​ಗಳಿಂದ ಸಾಲಮಾಡಿ ಜಮೀನು ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು 161 ಎಕರೆ ಪ್ರದೇಶದಲ್ಲಿ 100 ಎಕರೆ ಅರಣ್ಯ ಪ್ರದೇಶ ಎಂದು ತಕರಾರು ತೆಗೆದು ವಿನಾಕಾರಣ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಕಂದಾಯ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಅಗತ್ಯ ದಾಖಲೆ ಒದಗಿಸಬೇಕು ಎಂದು ಸುಣ್ಣದಹಳ್ಳಿ ಗ್ರಾಪಂ ಮಾಜಿ ಸದಸ್ಯ ಮಲ್ಲಪ್ಪ ಮನವಿ ಮಾಡಿದರು.

    ಸರ್ಕಾರ ರೈತರ ಜಮೀನಿನ ಪಕ್ಕ ಪೋಡಿ ಮಾಡಿಕೊಡುವಂತೆ ಆದೇಶ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸರ್ವೆಗೆ ಬರುವ ಮೋಜಿಣಿದಾರರು ತಾವು ಅಳತೆ ಮಾಡಿದ ಸರ್ವೆ ನಂಬರ್​ಗಳ ಬದಲಾಗಿ ಅಕ್ಕಪಕ್ಕದ ಜಮೀನುಗಳ ನಂಬರ್​ಗಳನ್ನು ನೀಡಿ ದಾಖಲೆ ಕೊಡುತ್ತಿದ್ದಾರೆ. ಇದರಿಂದ ಸರ್ವೆ ನಂಬರ್ ವ್ಯತ್ಯಾಸವಾಗುತ್ತಿದ್ದು, ನಿವೇಶನದಾರರು ಹಾಗೂ ರೈತರು ಜಗಳ ಮಾಡಿಕೊಳ್ಳುವಂತಾಗಿದೆ. ಕೂಡಲೇ ಈ ಲೋಪ ಸರಿಪಡಿಸಿಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts